ಕ್ಲಬ್ ಹೌಸ್ ಸಂವಾದ 127 ಅಗೋಸ್ಟ್ 3 ರಂದು ಜರಗಿತು. ಇಂದಿನ ‘ಅಡಿಕೆಯ ಬೆಳೆ ಸಂರಕ್ಷಣೆಯಲ್ಲಿನ ಸವಾಲುಗಳು ಮತ್ತು ಪರಿಹಾರ’ ಎಂಬ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದ ತುಣುಕುಗಳು ಈ ಕೆಳಗಿನಂತಿವೆ.
ದೋಟಿ ಸ್ಪ್ರೇ ತಂತ್ರಜ್ಞಾನ ಇದ್ದಾಗಲೂ ಬಿಡಿಸಲಾರದ ಕಗ್ಗಂಟಾಗಿ ಉಳಿದಿರುವುದು ಪರಿಣತ ಕಾರ್ಮಿಕರ ಸಮಸ್ಯೆ. ಹವಾಮಾನ ವೈಪರೀತ್ಯದ ಕಾರಣದಿಂದಲೂ ಕಾರ್ಮಿಕರ ಸಮಸ್ಯೆಯಿಂದಲೂ ಹಲವಾರು ಕೃಷಿಕರಿಗೆ ಸಮಯಕ್ಕೆ ಸರಿಯಾಗಿ ಶಿಲೀಂದ್ರ ನಾಶಕ ಸಿಂಪರಣೆ ಮಾಡಲು ಸಾಧ್ಯವಾಗದೆ ಕೊಳೆ ರೋಗ ಉಲ್ಬಣಾವಸ್ತೆಯನ್ನು ತಲುಪಿರುವ ವಿಚಾರ ಎಲ್ಲೆಡೆ ವ್ಯಾಪಕವಾಗಿದೆ.
ತೋಟಗಳಲ್ಲಿ ಕೊಳೆರೋಗದ ರೋಗಾಣು ಹೆಚ್ಚಾಗಿ ಇರುವುದರಿಂದ ರೋಗ ಉಲ್ಬಣ ಅವಸ್ಥೆಗೆ ತಲುಪುವುದು. ಅದನ್ನು ಹತೋಟಿಯಲ್ಲಿಡಲು ಸಾಕಷ್ಟು ಸಂಯೋಜಿತ ಕೃಷಿ ರೀತಿಯಲ್ಲಿ ಅವಲಂಬಿಸಬೇಕು. ಇವುಗಳಲ್ಲಿ ಮುಖ್ಯವಾದದ್ದು ಸಂಯೋಜಿತ ಪೋಷಕ ನಿರ್ವಹಣೆ ಜೊತೆಗೆ ಜೈವಿಕ ಕೀಟನಾಶಕಗಳ ಬಳಕೆ ಹಾಗೂ ಸ್ವಚ್ಛ ತೋಟಗಳ ಉಳಿಸಿಕೊಳ್ಳುವಿಕೆ.
ಬೆಳೆ ನಾಶದಿಂದ ಕಂಗೆಡದಿರಲು ಹಾಗೂ ಆರ್ಥಿಕ ಹಿಂಜರಿಕೆಯಿಂದ ಪಾರಾಗಲು ಬೆಳೆ ವಿಮೆಗೆ ಎಲ್ಲರೂ ಕೂಡ ಮನಸ್ಸು ತೋರಬೇಕು ಎಂಬುದು ಇನ್ನೊಂದು ಮಾತು.
ತ್ರಿ-ಕ್ಷಾರಿಯ ತಾಮ್ರ- ‘ಕ್ಯೂ ಫ್ಲೋ’ ಒಂದು ಭವಿಷ್ಯದ ಬೋರ್ಡೋ ಪರ್ಯಾಯ ಶಿಲೀಂದ್ರ ನಾಶಕ ಎಂದು ಅನಿಸಿಕೆ.
ಮೆಟಲಾಕ್ಸಿಲ್ ಹಾಗೂ ಪ್ಲಾಂಟೋಮೈಸಿನ್ ಈ ಬಾರಿ ಉಲ್ಬಣಗೊಂಡ ರೋಗದಿಂದ ಪಾರಾಗಲು ಸಹಾಯಕವಾಗಿವೆ ಎಂದು ತಿಳಿದು ಬಂತು. ಸಮಯದ ಅಭಾವದಿಂದ ಸಂವಾದವನ್ನು ಮೊಟಕುಗೊಳಿಸಲಾಯಿತು.
ಹೆಚ್ಚಿನ ವಿಚಾರಗಳಿಗೆ ಈ ಪುಟದಲ್ಲಿ ವಿಚಾರ ವಿಮರ್ಶೆಗೆ ತೆರೆದಿಡಲಾಗುತ್ತಿದೆ.
ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಳ್ಳಿ.
– ಹಳೆಮನೆ ಮುರಲೀಕೃಷ್ಣ