15-2025: ಸ್ವಾತಂತ್ರ್ಯೋತ್ಸವದ ವಿಶೇಷ ಕ್ಲಬ್ ಹೌಸ್ ಸಂವಾದ ಆಯೋಜಿಸಲಾಗಿತ್ತು.
ಡಾ. ಈಶ್ವರ ಭಟ್, IISR ಅವರಿಂದ ಸಿಕ್ಕಿದ ಸಂವಾದದ ಮಾಹಿತಿಯ ಆಯ್ದ ಭಾಗದ ಸಾರಾಂಶ:
ಕಾಳು ಮೆಣಸಿನ ತಳಿಗಳಲ್ಲಿ ತೇವಂ, ಶಕ್ತಿ, ಕುಂಬುಕ್ಕಲ್ ಮುಂತಾದ ತಳಿಗಳು ಸ್ವಲ್ಪಮಟ್ಟಿಗೆ ಸೊರಗು ರೋಗ ಪ್ರತಿರೋಧಕ ತಳಿಗಳಾಗಿ ಕಂಡುಬರುತ್ತವೆ. ಆದರೆ ಸಂಪೂರ್ಣ ರೋಗ ರಹಿತ ತಳಿಗಳು ಅತ್ಯಂತ ಪ್ರತಿಕೂಲ ವಾತಾವರಣಕ್ಕೆ ಇನ್ನೂ ವಿಕಸಿತವಾಗಿಲ್ಲ.
ಸಾವಯವ ಕಾಳು ಮೆಣಸು ಉತ್ಪಾದನೆಗೆ ಟ್ರೈಕೊಡರ್ಮ PGPR ಗಳ ಬಳಕೆಯಿಂದ, ಸ್ವಚ್ಛ ಪರಿಸರ ನಿರ್ಮಾಣ, ಅವಶ್ಯವಾಗಿದೆ. ಸಮಗ್ರ ಪೋಷಕಾಂಶಗಳ ನಿರ್ವಹಣೆ ತೋಟದ ಸ್ವಚ್ಛತೆ ಹಾಗೂ ಸಾಮೂಹಿಕ ರೋಗ ಪ್ರತಿರೋಧಕ ಕಾರ್ಯಕ್ರಮ ಚಟುವಟಿಕೆಗಳು ಕೊಳೆರೋಗ ತಡೆಗಟ್ಟಲು ನಿರ್ಣಾಯಕ ಪಾತ್ರ ವಹಿಸುತ್ತವೆ.
ಅಡಿಕೆ ಎಲೆ ಚುಕ್ಕಿ ರೋಗ ಕುಗ್ಗಿಸಲು ಹಾಗೂ ಅಡಿಕೆ ಕೊಳೆ ರೋಗ ಹತೋಟಿಗೆ ಅದರ ಜೊತೆಗೆ ಕಾಳು ಮೆಣಸಿನ ಸೊರಗು ರೋಗ ನಿಯಂತ್ರಣಕ್ಕೆ ಬೋರ್ಡ ಮಿಶ್ರಣ ಸಿಂಪರಣೆ ಉಪಯುಕ್ತ. ಹೆಚ್ಚಾದ ತೇವಾಂಶ ಇರುವ ವಾತಾವರಣದಲ್ಲಿ ಇದುವೇ ಹೆಚ್ಚು ಸಮರ್ಪಕ ಕೂಡ. ಕಾಳು ಮೆಣಸು ಬಳ್ಳಿಗಳಲ್ಲಿ ರೋಗ ಹಾಗೂ ಅಡಿಕೆ ಮರದಲ್ಲಿ ತೀವ್ರವಾದ ರೋಗ ಇದ್ದಾಗ ನಾಶಕವನ್ನು ಕೇವಲ ರೋಗವಿರುವ ಸಸಿಗಳಿಗೆ ಉಪಯೋಗಿಸಬೇಕು.
ಆದಷ್ಟು ವೈರಸ್ ರೋಗ ರಹಿತ ಬಳ್ಳಿಗಳನ್ನು ಗುರುತಿಸಿ ಬೆಳೆಸಬೇಕು ಹಾಗೂ ವೈರಸ್ ಭಾಧಿತ ಬಳ್ಳಿಗಳನ್ನು ನಾಶಪಡಿಸಿ ತೆಗೆದು ಬಿಡುವುದರಿಂದ ವೈರಸ್ ರೋಗ ಮುಕ್ತಿ ಸಾಧ್ಯ. ಕಾಳುಮೆಣಸಿನ ವೈರಸ್ ರೋಗ ಮಣ್ಣಿನ ಮೂಲಕ, ಹಾಗೂ ರಸ ಹೀರುವ ತಿಗಣೆಯಿಂದ ಪಸರಿಸುತ್ತದೆ.
ಜಂತು ಹುಳುಗಳಿಂದ ಬರುವ ನಿಧಾನ ಸೊರಗು ರೋಗಕ್ಕೆ ಹರಳು ಹಿಂಡಿ ಬಳಸಿ ಸಮಾಧಾನ ಪಡೆಯಬಹುದು.
– ಹಳೆಮನೆ ಮುರಲೀಕೃಷ್ಣ