ವಿವಿಧ ತಳಿಗಳ ಕೃಷಿಗೆ ಪ್ರೋತ್ಸಾಹಕ – ಅಮೂಲ್ಯ ಗಿಡಗಳ ನರ್ಸರಿಗಳು
ಕೃಷಿ ಅಭಿವೃದ್ಧಿ, ವೈವಿಧ್ಯಮಯ ಕೃಷಿ, ಇವುಗಳಲ್ಲಿ ಗಿಡಗಳ ನರ್ಸರಿಯ ಪಾತ್ರ ಬಹಳ ಮುಖ್ಯವಾದದ್ದು. ಒಂದು ಪ್ರದೇಶದ ಅಭಿವೃದ್ಧಿಯಲ್ಲಿ ಅಲ್ಲಿರುವ ಹಾಗೂ ಸುತ್ತು ಮುತ್ತಣ ನರ್ಸರಿಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ತರಕಾರಿ, ಹೂವಿನ ಗಿಡಗಳ ಬೀಜಗಳು, ಗಿಡಗಳು, ಕಸಿ ಗಿಡಗಳು, ಕೃಷಿ ಉತ್ಪನ್ನಗಳು ನರ್ಸರಿಗಳಲ್ಲಿ ಲಭಿಸುವ ಸಾಮಾನ್ಯ ಸಂಪನ್ಮೂಲಗಳು. ಇವುಗಳು ಕೇವಲ ಗಿಡಗಳಿಗಷ್ಟೇ ಅಲ್ಲದೆ ಇತರ ಕೃಷಿ ಸಲಕರಣೆಗಳಿಗೂ, ಸಂಪನ್ಮೂಲಗಳಿಗೂ ಉಪಯುಕ್ತ ಕೇಂದ್ರಗಳಾಗಿರುತ್ತವೆ. ಗಿಡಗಳಿಗಾಗಿ ಪಾಟ್ ಗಳು, ಶೇಡ್ ನೆಟ್ ಗಳು, ತೊಟ್ಟೆಗಳು, ಗೊಬ್ಬರದ ವಿವಿಧ ತರದ ಒದಗಿಸುವಿಕೆಯನ್ನು ಇಲ್ಲಿ ಮಾಡುತ್ತಾರೆ. ಕೆಲವು ನರ್ಸರಿಗಳು ಒಂದೇ ಬೆಳೆಯ ಕುರಿತು ಗಮನ ಹರಿಸಿದರೆ ಇತರ ನರ್ಸರಿಗಳು ಎಲ್ಲಾ ವಿಧದ ಗಿಡಗಳನ್ನು, ಲ್ಯಾಂಡ್ ಸ್ಕೇಪಿಂಗ್ ಅಗತ್ಯತೆಗಳನ್ನು, ಅಲಂಕಾರದ ಪರಿಕರಗಳನ್ನು, ಅಕ್ವೇರಿಯಂ ಕೂಡಾ ನೀಡುತ್ತವೆ. ಗಾರ್ಡನ್ ಗಿಡಗಳಿಗೆ ನರ್ಸರಿಯಲ್ಲಿ ಹೆಚ್ಚಿನ ಒಲವು ಇದ್ದರೂ ವಾಣಿಜ್ಯ ಬೆಳೆಗಳು, ಲಾನ್ ಗ್ರಾಸ್, ವೃಕ್ಷೋದ್ಯಾನದ ಗಿಡಗಳು, ಹೊಲದ ಬೆಳೆಗಳು, ಕೃಷಿ ಸೇವೆಗಳಲ್ಲೂ ವಿಶೇಷತೆ ತೋರುವ ನರ್ಸರಿಗಳಿವೆ.
ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಒಳಗಿನ ಹಾಗೂ ಆಸುಪಾಸಿನ ಕೇರಳ ಹಾಗು ಕರ್ನಾಟಕದ ನರ್ಸರಿಗಳ ಒಂದು ಪಕ್ಷಿನೋಟ ಪ್ರಯೋಜನಕರವಾಗಿರುತ್ತದೆ.
ಮಂಜೇಶ್ವರ ತಾಲೂಕು
ಕಾಸರಗೋಡಿನ ಉತ್ತರ ಭಾಗದ ಬ್ಲಾಕ್ ಮಂಜೇಶ್ವರವು ಕೃಷಿ ಪ್ರಧಾನ ಪ್ರದೇಶವಾಗಿದೆ. ಇದರಲ್ಲಿ ಬಾಯಾರಿನ ಲಾಲ್ ಬಾಗಿನಲ್ಲಿ ಒಂದು ಗಿಡಗಳ ನರ್ಸರಿ ಇದೆ.
ಕಾಸರಗೋಡು ತಾಲೂಕು
ಮಂಜೇಶ್ವರದ ನಂತರ ದಕ್ಷಿಣಕ್ಕೆ ಕಾಸರಗೋಡು ಬ್ಲಾಕ್ ಇದೆ. ಇಲ್ಲಿ ಸರಕಾರೀ ಕ್ಷೇತ್ರದಲ್ಲೂ, ಖಾಸಗಿ ಕ್ಷೇತ್ರದಲ್ಲೂ ಗಿಡಗಳ ನರ್ಸರಿಗಳಿವೆ.
ಈ ಮೇಲಿನ ಎರಡು ಕ್ಷೇತ್ರಗಳಿಂದ ಉತ್ತಮ ಅಡಿಕೆ ಹಾಗೂ ತೆಂಗಿನ ಗಿಡಗಳು ಲಭಿಸುವ ನರ್ಸರಿಗಳಿವೆ. ಕಾಸರಗೋಡಿನ ಸೀಪಿಸಿಆರ್ ಐ ಕೇಂದ್ರೀಯ ನರ್ಸರಿ ಹೊಂದಿದೆ. ಇದು ರಾಷ್ಟೀಯ ಮಾನ್ಯತೆ ಹೊಂದಿದ ಏಕೈಕ ಚತುರ್ ನಕ್ಷತ್ರ ತೆಂಗಿನ ನರ್ಸರಿ.
ಮುಂದುವರಿದರೆ ದಕ್ಷಿಣ ಭಾಗದಲ್ಲಿ ಹೊಸದುರ್ಗ ಬ್ಲಾಕಿನಲ್ಲಿ ಕೆಲವು ನರ್ಸರಿಗಳಿವೆ. ಕೇರಳ ಕೃಷಿ ವಿಶ್ವವಿದ್ಯಾಲಯದ ಅಂಗವಾಗಿ ತೋಟಗಾರಿಕಾ ಕಾಲೇಜು ಪಡನ್ನಕ್ಕಾಡ್ ಇಲ್ಲಿನ ನರ್ಸರಿಯು ಹಣ್ಣಿನ ಗಿಡಗಳಿಗೆ ಹೆಸರಾಂತ ನರ್ಸರಿಯಾಗಿದೆ. ಅಸು ಪಾಸಿನ ಮಂಗಳೂರು, ಉಡುಪಿ, ಪುತ್ತೂರು, ಸುಳ್ಯ ಮುಂತಾದ ಭಾಗಗಳ ನರ್ಸರಿಗಳ ಪಾತ್ರ ಅಲ್ಲಗಳೆಯುವಂತಿಲ್ಲ.