Listen to The Monthly Clubhouse :- https://clubhouse.com/@hmkrishna

ಕೊಳೆರೋಗ ಮುಕ್ತ ಅಡಿಕೆಯ ತೋಟ

ಸ್ವಲ್ಪ ಸಮಾಧಾನ ಏನೆಂದರೆ ಈಗ ನಮಗೆ ಒಂದು ಬಿಡುವು ಲಭಿಸಿ ರೋಗಗ್ರಸ್ಥ ತೋಟಗಳಿಗೆ ಔಷಧ ಸ್ಪ್ರೇ ಮಾಡಲು ಸಹಾಯಕವಾಗಿದೆ.

ಆದರೆ ಕೊಳೆರೋಗ ವ್ಯಾಪಿಸಿದ ಸ್ಥಿತಿಗೆ ಈಗ ಮಾಡಿದ ಒಂದು ಸ್ಪ್ರೇ ಸಾಕಾಗದು.

ಆದ್ದರಿಂದ ಈಗಾಗಲೇ ಕೊಳೆರೋಗ ಬಂದಿರುವ ಮರಗಳಿಗೆ ಈಗಿನ ಸ್ಪ್ರೇಯ ನಂತರ ಇನ್ನೊಂದು ತಿಂಗಳ ಅಂತರದಲ್ಲಿ ಪುನಃ ಸ್ಪ್ರೇ ಅತೀ ಅವಶ್ಯಕ.

ಇದಕ್ಕೆ ಕಾರಣ ವಾತಾವರಣ ತಂಪಾಗಿರುವುದು ಹಾಗೂ ಅತ್ಯಂತ ಹೆಚ್ಚು ತೇವಾಂಶ ಕೂಡಿರುವುದು. ಮುಂದೆ ಬರಲಿರುವುದು ಇಬ್ಬನಿಯ ಕಾಲ. ಆದ್ದರಿಂದ ತೇವಾಂಶ ಅದೇ ರೀತಿ ಮುಂದುವರೆಯುತ್ತದೆ ಹಾಗೂ ಕೊಳೆರೋಗ ಪುನಃ ತಲೆ ಎತ್ತಲು ಕಾರಣವಾಗುವುದು.

ನಂತರ ಅಕ್ಟೋಬರ್ ಕೊನೆಯಲ್ಲಿ ಟ್ರೈಕೊಡರ್ಮವನ್ನು ಕೂಡ ಚೆನ್ನಾಗಿ ಯೋಜನೆ ಹಾಕಿ ಬಳಸಬಹುದು. ಅದು ಎಲೆ ಚುಕ್ಕಿ ಹಾಗೂ ಹಿಂಗಾರ ಕರಟುವ ಡೈ ಬ್ಯಾಕ್ ರೋಗದ ಹತೋಟಿಗೂ ಉತ್ತಮ.

ನೀವು ಈ ರೀತಿ ಕೈಗೊಳ್ಳುವ ನಿರ್ಧಾರ ನಿಮ್ಮ ಮುಂದಿನ ಆರೋಗ್ಯಕರ ತೋಟಕ್ಕೆ ಉಪಯುಕ್ತ. ಈ ನಿರ್ಣಯ ಕೈಗೊಳ್ಳದಿದ್ದರೆ ತೋಟ ಖಾಲಿ ಖಾಲಿ ಆಗುತ್ತಾ ಬರಬಹುದು. ಅಡಿಕೆ ಮರಗಳ ಕೊಬೆಗಳು ಹಳದಿಯಾಗಿ ತುಂಡಾಗಿ ಬೀಳುವ ಅವಸ್ಥೆಯನ್ನು ಕಾಣಲು ಯಾವುದೇ ಕೃಷಿಕ ಬಯಸಲಾರ. ತೆಂಗು, ಕಾಳುಮೆಣಸು ಹಾಗೂ ಕೊಕ್ಕೋ ಗಳಿಗೂ ಇದು ಅನ್ವಯವಾಗುತ್ತದೆ. ಇಲ್ಲವಾದರೆ ಮುಂದೆ ತೆಂಗು, ಕಾಳುಮೆಣಸು ಹಾಗೂ ಕೊಕ್ಕೋದ ಜಾಗತಿಕ ಕೊರತೆಗೂ ಕಾರಣ ಆಗಬಹುದು.

ಆದ್ದರಿಂದ ಅಭಿವೃದ್ಧಿಶೀಲ ಗ್ಲೋಬಲ್ ಕೃಷಿ ಕರು ಇದನ್ನು ಮುಂಜಾಗ್ರತಾ ಕ್ರಮವೆಂದೇ ಪರಿಗಣಿಸಿ ತಮ್ಮ ತಮ್ಮ ಕೃಷಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರಿ.

-ಹಳೆಮನೆ ಮುರಲೀಕೃಷ್ಣ.

Leave a Reply

Your email address will not be published. Required fields are marked *