ಇದೀಗ ಆಧುನಿಕ ಐಟಿ ಯುಗದಲ್ಲಿ ಎಲ್ಲವಕ್ಕೂ ಆಪ್ ಗಳು ಸಹಾಯಕವಾಗುತ್ತವೆ. ಮೊಬೈಲ್ ಸ್ಮಾರ್ಟ್ ಫೋನ್ ಎಲ್ಲರ ಕೈಯಲ್ಲಿದೆ. ಯಾವ ಆಪ್ ಗಳೆಲ್ಲಾ ಬೇಕಾಗುತ್ತವೆ? ಯಾವುದು ಉಪಕಾರಿ ಇದರ ಬಗ್ಗೆ ಅನುಭವಿಗಳಿಂದ ತಿಳಿಯೋಣ.
ಇಲ್ಲಿ ನೋಡಿ ನಮ್ಮ ಹವ್ಯಾಸಿ ಸಂಶೋಧನಾತ್ಮಕ ಕೃಷಿಕರ ಬಳಗ ಏನು ಮಾಡುತ್ತಿದೆ ಎಂದು.
ಒಂದಷ್ಟು ಜನ ಮಳೆ ಮಾಪನ ಮಾಡುತ್ತಾರೆ. ಇವರಲ್ಲಿ ಕೆಲವರು ಆಧುನಿಕ ತೇವಾಂಶ, ಉಷ್ಣತೆ, ತಿಳಿಯಲು ಇವನ್ನು ತೋರಿಸುವ ಡಿಜಿಟಲ್ ಕ್ಲಾಕ್ ಗಳನ್ನು ಬಳಸುತ್ತಾರೆ. ಈ ಎಲ್ಲಾ ಅಂಕಿ ಅಂಶಗಳನ್ನು ರಿಜಿಸ್ಟರ್ ಮಾಡಿಟ್ಟುಕೊಳ್ಳುತ್ತಾರೆ. ಇವರಲ್ಲಿ ಇನ್ನೂ ಮುಂದುವರಿದ ಕೆಲವರು ಮೊಬೈಲ್ ಆಪ್ ಗಳನ್ನು ಬಳಸಿ ಉಪಗ್ರಹ ಚಿತ್ರವನ್ನು ಗಮನಿಸಿ ಹವಾಮಾನ ಮುನ್ಸೂಚನೆಯನ್ನು ನೀಡುತ್ತಾರೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಇವರೆಲ್ಲಾ ‘ಮಳೆ ಮಾಪನ’ ಎಂಬ ವಾಟ್ಸಾಪ್ ಗ್ರೂಪು ಮಾಡಿಕೊಂಡು ಈ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡು ವಿಚಾರ ವಿಮರ್ಶೆ, ಪರಸ್ಪರ ಪ್ರೋತ್ಸಾಹ, ಪ್ರಯೋಜನಗಳಿಂದ ಪಡಕೊಂಡ ಖುಷಿಯನ್ನು ಹಂಚಿಕೊಳ್ಳುತ್ತಾರೆ.
ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು, ಹಾಗೂ ಉಡುಪಿ ಸೇರಿ ಸುತ್ತುಮುತ್ತಲಿನ ಕೃಷಿಕರು, ವಿಜ್ಞಾನಿಗಳು ಇದರಲ್ಲಿ ಸದಾ ಸಕ್ರಿಯರಾಗಿ ನಿಸ್ವಾರ್ಥ ಮಾಹಿತಿ ವಿನಿಮಯ ನಡೆಸುತ್ತಾರೆ.
ಮುಖ್ಯವಾಗಿ ಎರಡು ಬ್ಲಾಗ್ ಗಳನ್ನು ಹಾಗೂ ಅದರಲ್ಲಿದ್ದುಕೊಂಡು ಹವಾಮಾನ ನಿರೀಕ್ಷಣೆಯ ಈ ಗುಂಪನ್ನು ನಡೆಸುತ್ತಿರುವವರನ್ನೂ ಇಲ್ಲಿ ಶ್ಲಾಘಿಸಲೇ ಬೇಕು.
- The Rural Mirror
- Sai Shekhar B Blog