ಟೀಕೆಗೆ ಕಿವುಡರಾಗಿ ವರ್ತಿಸಿ—ಒಂದು ನುಡಿಮುತ್ತು
ಒಮ್ಮೆ ನಾವು ಕೆಲವು ಮಂದಿ ಮಹಿಳೆಯರು ಮಾತನಾಡುತ್ತಾ ಸಾಗುತ್ತಿದ್ದಾಗ, ಹಾದಿಯಲ್ಲಿ ಎದುರು ಸಿಕ್ಕಿದಾತ ಒಬ್ಬಾಕೆಯ ಕಿವಿಯಲ್ಲಿ ಏನೋ ಪಿಸುಗುಟ್ಟಿದ. ತುಸುಮುಂದೆ ಸಾಗಿದಾಗ ಆತ ಕಿವಿಗೂದಿದ್ದು ಅನ್ಯರು ಮಾಡಿದ ಟೀಕೆಯನ್ನು ಎಂಬುದಾಗಿ ತಿಳಿಯಿತು. ಆಕೆಯ ಮುಖ ವಿಕಾರದಿಂದ ಹಾಗೂ ಅವಳ ಮಾತಿನಿಂದ ಮನೋವೇದನೆ ಅರಿಯಿತು. ಅದು ನಮ್ಮ ಗುಂಪಿನ ಪ್ರತಿಯೊಬ್ಬರಿಗೂ ಹರಡಲು ತಡವಾಗಲಿಲ್ಲ. ಇತರರನ್ನು ಹೀನಾಯ ಶಬ್ದಗಳನ್ನು ಬಳಸಿ, ಒಬ್ಬರನ್ನು ಇನ್ನೊಬ್ಬರಲ್ಲಿ ವ್ಯಂಗ್ಯವಾಡುವುದನ್ನು ಎಲ್ಲೆಡೆ ಕಾಣುತ್ತೇವೆ. ಆಪ್ತರೆಂದು ಕರೆಸಿಕೊಳ್ಳುವವರೂ ಸುಳ್ಳು ಟೀಕೆ ಪ್ರಚಾರ ಮಾಡಿದಾಗ ಮನಸ್ಸು ಸಂಕಟ ಪಡುವುದು ಸಹಜ. ಮನದೊಳಗಿನ ದ್ವೇಷಾಸೂಯೆಗಳನ್ನು ಹೊರಹಾಕುವ …