ಕುಟುಂಬದಲ್ಲಿ ಸಾಮರಸ್ಯದ ಅಗಾಧತೆ ಹೇಗೆ…
ಆತ್ಮೀಯರಲ್ಲಿಗೆ ಅಪರೂಪಕ್ಕೆ ಹೋಗಿದ್ದೆ. ಹತ್ತಿಪ್ಪತ್ತು ಜನರಿದ್ದ ತುಂಬಿದ ಕುಟುಂಬ. ಮನೆ ಮಂದಿಯಲ್ಲಿ ಎಂಥಾ ಬಾಂಧವ್ಯ! ಒಡನಾಟ, ಸಾಮರಸ್ಯ! ಮನೆಯೊಳಗೆ ಪ್ರೀತಿ ತುಳುಕುವ ವಾತಾವರಣ. ಮನೆಮೆಂಬರಲ್ಲಿ ಯಾರ ನೆಂಟರೋ ಆತ್ಮೀಯರೋ ಅವರೇ ಮಾತನಾಡಿಸಲಿ, ಎಂಬ ಜಾಯಮಾನ ಅಲ್ಲಿಲ್ಲ. ಒಂಟಿತನ ನೀಗುವ ಪರಿಸರ! ಇದ್ದರೆ ಇಂತಹ ಕುಟುಂಬ ಇರಬೇಕು ಅನಿಸದ್ದು ಆಶ್ಚರ್ಯವಲ್ಲ. ಮನೆಯವರಲ್ಲಿ ಹೆಚ್ಚಿನ ಮಹಿಳೆಯರೂ ಮಹನೀಯರೂ ಹೊರಗೆ ಹೋಗಿ ದುಡಿಯುವವರು. ಪ್ರತಿಯೊಬ್ಬರಲ್ಲೂ ಮಾತನಾಡಿಸಿದಾಗ, ಕೂಡು ಕುಟುಂಬಕ್ಕೆ ಕಾರಣ ಕೇಳಿದಾಗ; ತಮ್ಮ-ತಮ್ಮ ಹೆಗ್ಗಳಿಕೆ ಹೇಳಿಕೊಳ್ಳದೆ ಇತರ ಮನೆಮಂದಿಯನ್ನು ಬೊಟ್ಟು ಮಾಡುವ …