ಮಾರುಕಟ್ಟೆ ಸುಸ್ಥಿರತೆ ಕೃಷಿಕರ ಕೈಯಲ್ಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಶ್ರೀ ಕಿಶೋರ್ ಕೊಡ್ಗಿ ಅಭಿಪ್ರಾಯ ಪಟ್ಟರು. ಅಡಿಕೆ ಕೃಷಿಕರು ಟಿ.ಎಸ್.ಎಸ್. ಮಾದರಿಯಲ್ಲಿ ಕ್ಯಾಂಪ್ಕೋ ದ ಮೇಲೆ ಭರವಸೆ ಇಟ್ಟು ಹೆಚ್ಚು ಪ್ರಮಾಣದಲ್ಲಿ ಮಾರುಕಟ್ಟೆಗೆ ಸುಸ್ಥಿರತೆ ಕೊಡುವ ನಿರ್ಣಯ ಸ್ವತಃ ಕೈಗೊಳ್ಳಬೇಕು. 1.20 ಲಕ್ಷ ಸದಸ್ಯರಿರುವ ಕ್ಯಾಂಪ್ಕೋ ಕೃಷಿಕರ ಸೌಕರ್ಯಕ್ಕಾಗಿ ಅವರವರ ಮನೆಗಳಿಂದಲೇ ಖರೀದಿಸಲು ಕ್ಯಾಂಪ್ಕೋ ಆನ್ ವೀಲ್ಸ್ ಯೋಜನೆ ಆರಂಭಿಸಿದೆ.
ಸದಸ್ಯರಿಗೆ ಪ್ರೋತ್ಸಾಹಕವಾಗಿ ಹೆಚ್ಚು ಅಡಿಕೆ ಸಂಗ್ರಹಿಸಲು, ಸಕ್ರಿಯ ಸದಸ್ಯರಿಗೆ ಸವಲತ್ತು ನೀಡುವುದು ವಿಮಾ ಸೌಲಭ್ಯ ಒದಗಿಸುವುದು ಮುಂತಾದ ಯೋಜನೆಗಳಿವೆ.
ಅಡಿಕೆಯ ನೇರ ಮಾರಾಟ ಉತ್ತರ ಭಾರತದಲ್ಲಿ ಮಾಡುವ ಸಲುವಾಗಿ ಸೂರತ್, ಜುನಾಗಡ್, ರಾಜಕೋಟ್, ಖೇಡ್, ದಿಲ್ಲಿ, ಮುಂಬೈ, ಪಾಟ್ನಾ, ಝಾರ್ಖಂಡ್, ಕೊಲ್ಕತ್ತಾದಲ್ಲಿ ಡಿಪೋ ಗಳನ್ನು ಸಜ್ಜೀಕರಣ ಮಾಡಲಾಗುವುದು.
ಅಡಿಕೆಯ ಹಳದಿ ಎಲೆ ರೋಗದ ಕುರಿತು ಸಕ್ರಿಯ ಪಾತ್ರ ವಹಿಸಲಾಗುವುದು ಹಾಗೂ ಸಂಶೋಧನೆಗಾಗಿ ಆದಾಯದ 2% ಮೊತ್ತದಲ್ಲಿ ಈ ನಿಟ್ಟಿನಲ್ಲೂ ವಿನಿಯೋಗಿಸುವ ಯೋಜನೆ ಇದೆ. ಇದಕ್ಕಾಗಿ ಕೃಷಿಕರಿಗೆ ತ್ವರಿತ ಶಮನಕ್ಕೂ, ದೀರ್ಘ ವೀಕ್ಷಣೆಯ ಯೋಜನೆಗಳನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ.
ಅಡಿಕೆಯ ಮೌಲ್ಯ ವರ್ಧನೆಗೆ ಕ್ಯಾಂಪ್ ಕೋ – ಆಳ್ವಾಸ್ ಕಾಲೇಜ್, ರಾಮಯ್ಯ ಮೆಡಿಕಲ್ ಇನ್ಸ್ಟಿಟ್ಯೂಟ್ ಮುಂತಾದ ಸಂಸ್ಥೆಗಳೊಂದಿಗೆ ಕೈಜೋಡಿಸಿ ಮುಂದುವರಿಯುತ್ತಿದೆ. ಅಲ್ಜಿಮಾರ್ ವೈಕಲ್ಯ, ಆಯಿಂಟ್ಮೆಂಟ್, ಔಷಧ ಸತ್ವಗಳಲ್ಲಿ ಅಡಿಕೆಯ ಉಪಯೋಗ, ಮುಂತಾದವುಗಳು ಪ್ರಗತಿಯಲ್ಲಿವೆ. ಅಡಿಕೆ ಸಿಪ್ಪೆಯ ಉಪಯೋಗಕ್ಕೂ ಒತ್ತು ನೀಡಲಾಗುತ್ತದೆ.
ಸಂವಾದದ ಸಂಪೂರ್ಣ ವಿವರಣೆ ಧ್ವನಿ ಸುರುಳಿಯಲ್ಲಿದೆ.