ಭಾರತ್ ರಸಗೊಬ್ಬರ

ಭಾರತಕ್ಕೆಲ್ಲಾ ರಸಗೊಬ್ಬರ ಸಮಾನ ರೂಪ – ಮಾರುಕಟ್ಟೆಗೆ ಏಕೀಕೃತ ಬ್ರಾಂಡ್

ಇನ್ನು ನಿಮ್ಮ ಇಷ್ಟಪಟ್ಟ ಬ್ರಾಂಡ್ ಫರ್ಟಿಲೈಜರ್ ಇರಲ್ಲ

ಇನ್ನು ಹಲವಾರು ರಸಗೊಬ್ಬರದ ಹೆಸರುಗಳು ಅಳಿಸಿ ಹೋಗಲಿವೆ. ಯಾಕೆಂದರೆ ದೇಶದಲ್ಲಿ ರಸಗೊಬ್ಬರ ಹೆಸರಿನ ವರ್ಣನೆಯೊಂದಿಗೆ ಕಬಳಿಸಬಾರದು, ನಕಲಿ ಹಾಗೂ ಕಳಪೆ ಸಾಮಗ್ರಿಗಳು ಮಾರುಕಟ್ಟೆಯಲ್ಲಿ ಮೋಸ ಮಾಡಬಾರದು ಎಂಬುದು ಸರಕಾರದ ಉದ್ದೇಶ.

ಭಾರತ್ ಒಂದೇ ದೇಶದಾದ್ಯಂತ ಎಲ್ಲ

ನೂತನ ‘ಒಂದು ರಾಷ್ಟ್ರ – ಒಂದು ರಸಗೊಬ್ಬರ’ ನೀತಿಯಿಯಿಂದ ಗೋಣಿಗಳ ಮೇಲೆ ಎದ್ದು ಕಾಣುವಂತೆ ಭಾರತ್ ರಸಗೊಬ್ಬರ ಎಂದೇ ಬರೆಯಬೇಕು. ರಸಗೊಬ್ಬರ ಗೋಣಿಯ ಪ್ರಮುಖ ಮೂರನೇ ಎರಡು ಭಾಗ ಏಕೀಕೃತ ಬ್ರಾಂಡ್ ಆಗಿರಬೇಕು. ಗೊಬ್ಬರದ ಬೇರಾವುದೇ ಬ್ರಾಂಡ್ ಬರೆಯುವಂತಿಲ್ಲ.

ಬ್ರಾಂಡ್ ಹೆಸರಿನ ಕಬಳಿಸುವಿಕೆ ಸಲ್ಲ

ಬ್ರಾಂಡ್ ಇಲ್ಲ ಅಂದರೆ ಮಾರಾಟ ಇಲ್ಲ ಅಂತ ಆಗಬಹುದೇ? ಹೆಚ್ಚಿನ ಗೊಬ್ಬರಗಳೂ ಅಮದಾಗುತ್ತಿವೆ. ಇದರ ಬಹು ಪಾಲು ಸರಕಾರ ವಹಿಸುತ್ತಿದೆ. ಪ್ರತಿಯೊಂದು ಕಂಪೆನಿಗೂ ತನ್ನ ಉಳಿವಿಗಾಗಿ ಟರ್ನ್ ಓವರ್ ಬೇಕೇ ಬೇಕು. ಕೃಷಿಕರಿಗೂ ರಸಗೊಬ್ಬರ ಬೇಕು. ಇವು ಸರಕಾರದ ಹತೋಟಿಯಲ್ಲಿ ಇರುವ ವ್ಯವಸ್ಥೆಗಳಾದ್ದರಿಂದ ಹೆಚ್ಚೇನೂ ಭಯ ಬೇಡ.

ಅಕ್ಟೊಬರ್ 2 ರಿಂದ “ಭಾರತ್ ಯೂರಿಯಾ”, “ಭಾರತ್ ಎಂ.ಓ.ಪಿ.”, “ಭಾರತ್ ಎನ್.ಪಿ.ಕೆ.” ಹಾಗೂ “ಭಾರತ್ ಡಿ.ಎ.ಪಿ.”, ಎಂಬ ನಮೂದಿಸುವಿಕೆ ಹಾಗೂ ಪ್ರಧಾನ ಮಂತ್ರಿ ಭಾರತ್ ಜನ ಊರ್ವರಕ್ ಪರಿಯೋಜನಾ (ಪಿಎಂಬಿಜೆಪಿ) ಎಂದೇ ಪ್ರತೀ ಗೋಣಿಗಳಲ್ಲಿ ಎದ್ದು ಕಾಣುವಂತೆ ಅಚ್ಚು ಹೊಡೆಯಬೇಕಾಗುತ್ತದೆ.
ಇದರಿಂದಾಗಿ ರಸಗೊಬ್ಬರದ ಬ್ರಾಂಡ್ ತಾಕಲಾಟ ಇಲ್ಲದಾಗಬಹುದು.

ಬ್ರಾಂಡ್ ಗಾಗಿ ಸಾಗಾಟದ ವೆಚ್ಚ ಇಲ್ಲ

ಆಂಧ್ರಾ, ಉತ್ತರ ಪ್ರದೇಶ, ಗುಜರಾತ್, ಕೊಚ್ಚಿ, ಮಹಾರಾಷ್ಟ್ರ, ಎಂಬ ದೂರದ ಊರಿನ ಗೊಬ್ಬರದ ಬದಲು ಕ್ರಮೇಣ ಮಂಗಳೂರು, ಬೆಂಗಳೂರು, ಚಿತ್ರದುರ್ಗ, ಬೆಳಗಾವಿಯ ಕಂಪೆನಿಗಳಿಗೆ ರಾಜ್ಯದಲ್ಲೇ ಹೆಚ್ಚು ಮಾರಾಟ ಅವಕಾಶ ಉಂಟಾಗಲಿದೆ. ಸಾಗಾಟ ಇಂದಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಖರ್ಚಿಗೆ ದಾರಿ ಮಾಡುವುದರಿಂದ ಇಲ್ಲಿ ಅದೂ ಕೂಡಾ ಕಡಿಮೆ ಆಗುವುದರಲ್ಲಿ ಸಂಶಯವಿಲ್ಲ.

ಈ ನೂತನ ನಿಯಮ ದೂರದರ್ಶಿ

ಇದು ಜನ ಔಷಧಿಯಂತೆಯೇ ಆದರೂ, ಅಲ್ಲದಿದ್ದರೂ, ಬೇವಿನೆಣ್ಣೆ ಲೇಪಿತ ಯೂರಿಯಾದಂತೆ ಒಂದು ಕ್ರಾಂತಿಕಾರಿ ಸೌಲಭ್ಯವಾಗಬಹುದು.
ಕೃಷಿಕರಿಗೆ ಕೆಲ ಕಾಲ ಬ್ರಾಂಡ್ ಗೆ ಒಗ್ಗಿ ಹೋಗಿರುವುದರಿಂದ ಸ್ವಲ್ಪ ಇರುಸು ಮುರಿಸು ಹಾಗೂ ಬೇಕಾದ ಕಂಪೆನಿಯ ಪರದಾಟದ ಅನುಭವ ತಲೆದೋರಿದರೂ, ಇದೊಂದು ಧನಾತ್ಮಕ ಬೆಳವಣಿಗೆಯೂ, ಕೃಷಿ ಕ್ಷೇತ್ರಕ್ಕೆ ವರದಾನವೂ ಆಗುವುದನ್ನು ಮನಗಂಡು ಬಳಕೆಯಲ್ಲಿ ಉತ್ತಮ ಫಲ ನಿರೀಕ್ಷೆ ಮಾಡೋಣ.

ಮುಂದೇನು?

ಮುಂದೆ ಇದೇ ರೀತಿ ಆಗಬೇಕಾಗಿರುವ ಕ್ಷೇತ್ರ ಮೈಲುತುತ್ತ, ಸುಣ್ಣ, ಎಗ್ರೋ – ಕೆಮಿಕಲ್ ಕ್ಷೇತ್ರವಾಗಿದೆ. ಇವುಗಳೆಲ್ಲ ಬ್ರಾಂಡ್ ಕಬಳಿಕೆ ಇಲ್ಲದೆ ಏಕೀಕೃತ ಬ್ರಾಂಡ್ ಸೌಲಭ್ಯ ಆಗಬೇಕಿದೆ.

-ಮುರಲೀಕೃಷ್ಣ ಎಡನಾಡು.

Leave a Comment

Your email address will not be published. Required fields are marked *

Scroll to Top