ಜೈವಿಕ ಇಂಧನ ಕೃಷಿ ಚಟುವಟಿಕೆ — ಬಯೋಡೀಸೆಲ್ ಉತ್ಪಾದನೆಯತ್ತ

ಬಯೋಡೀಸೆಲ್ ಕುರಿತಾದ ಕ್ಲಬ್ ಹೌಸ್ ಸಂವಾದದಲ್ಲಿ 21 ನವೆಂಬರ್ 2021 ರಂದು ಪಯಸ್ವಿನಿ ವೇದಿಕೆಯಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳು

  1. ಕೇಶವಮೂರ್ತಿ, ನಿರ್ದೇಶಕರು, ಲಿಬ್ರಾನ್ ಎನರ್ಜಿ, ಪುತ್ತೂರು, ಮೊಬೈಲ್ +919449607538.
  2. ಡಾ. ಎಲ್. ಪ್ರಸನ್ನಕುಮಾರ್, ಪ್ರಾಧ್ಯಾಪಕರು, ಪಿಇಎಸ್ ಇಂಜಿನಿಯರಿಂಗ್ ಕಾಲೇಜು, ಮಂಡ್ಯ, , ಮೊಬೈಲ್ +919844574374.
  3. ಡಾ. ಭವಿಷ್ಯ, ವಿಜ್ಞಾನಿಗಳು, ಸಿ.ಪಿ.ಸಿ.ಆರ್.ಐ., ವಿಟ್ಲ, ಮೊಬೈಲ್ +919538346917.

ಬಯೋಡೀಸೆಲ್, ಏನಿದು?

ಬಯೋಡೀಸೆಲ್ ಎಂದರೆ ನೈಸರ್ಗಿಕ ಸಸ್ಯಜನ್ಯ ಎಣ್ಣೆಯನ್ನು ಎಸ್ಟರಿಫೈಕೇಶನ್, ಟ್ರಾನ್ಸ್ ಎಸ್ಟರಿಫೈಕೇಶನ್ ಕ್ರಿಯೆಗಳಿಂದ ಮಾಡುವ ಇಂಧನ.
ಇದರ ಉಪಯೋಗದಿಂದಾಗಿ ಪರಿಸರಕ್ಕೆ ಹಾನಿಕಾರಕ ವಾದಂತಹ ಕಾರ್ಬನ್ ವಾತಾವರಣಕ್ಕೆ ಸೇರುವುದಿಲ್ಲ.
ಅಷ್ಟೇ ಅಲ್ಲ ಇದು ಒಂದು ಸಸ್ಯಜನ್ಯವಾದ ವಸ್ತುವಾದ್ದರಿಂದ ಪುನಹ ಪುನಹ ಉತ್ಪಾದಿಸಲು ಸಾಧ್ಯ. ಆದರೆ ಭೂಮಿಯಲ್ಲಿಸಿಗುವ ಪೆಟ್ರೋಲಿಯಂ ಗಣಿಗಾರಿಕೆ ಮಾಡಿದ ಹಾಗೆ ಮುಗಿದು ಹೋಗುತ್ತದೆ ಎಂಬುದೇ ಮುಖ್ಯ ವಿಷಯ. ಇದರಿಂದ ಇದನ್ನು ಕಾರ್ಬನ್ ಪಡಿಯಚ್ಚು ಹತೋಟಿಗೆ ಸಹಾಯಕ ಎಂದು ಪರಿಗಣಿಸಲಾಗುತ್ತದೆ.

ಸಸ್ಯ ಸಂಪನ್ಮೂಲ

ಬಯೋಡೀಸೆಲ್ ಉತ್ಪಾದನೆಯಲ್ಲಿ ಜಟ್ರೋಪ ಎಂಬ ಸಸ್ಯ ಹೆಚ್ಚು ಹೆಸರು ಮಾಡಿದರೂ, ನಮ್ಮ ಪರಿಸರಕ್ಕೆ ಅನುಕೂಲವಾಗಿ ಹೊನ್ನೆ, ಹರಳು, ಬಿದಿರು, ಬೇವು, ಸಿಮಾರೂಬಾಗಳನ್ನು ಕಂಡುಕೊಳ್ಳಲಾಗಿದೆ.
ನಮ್ಮ ದೇಶದಲ್ಲಿ ಖಾದ್ಯತೈಲವನ್ನು ಬಯೋಡೀಸಲ್ ಉತ್ಪಾದನೆಗೆ ಬಳಸುವಂತಿಲ್ಲ. ಆದರೆ ಅಖಾದ್ಯ ತೈಲಗಳಾದ ಅಡುಗೆಗೆ ಬಳಸಿ ಹಳತಾದ ಎಣ್ಣೆ, ಇದರ ಮತ್ತು ಉಪಯೋಗಿಸದ ಸಸ್ಯಜನ್ಯ ತೈಲಗಳು ಬಯೋಡೀಸೆಲ್ ಉತ್ಪಾದನೆಗೆ ಬಳಸಲ್ಪಡುತ್ತವೆ.

ಈ ರೀತಿ ಬಯೋಡೀಸೆಲ್ ಗೆ ಉಪಯುಕ್ತವಾದಂತಹ ಉತ್ಪನ್ನಗಳನ್ನು ತಯಾರಿಸಲು ಕೃಷಿಕರು ಮುಂದೆ ಬರುವುದರಿಂದ ಅವರಿಗೆ ತಮ್ಮ ಬಂಜರು ಭೂಮಿಯನ್ನು ಸದುಪಯೋಗ ಪಡಿಸಿದಂತೆ, ಅದೇ ರೀತಿ ತಮ್ಮ ಜಾಗದಿಂದ ಹೆಚ್ಚು ಆದಾಯ ಪಡೆಯಲು ಸಾಧ್ಯ.
ಇದರ ಜೊತೆಗೆ ಕಾರ್ಮಿಕರ ಅಗತ್ಯ ಹಾಗೂ ಉದ್ಯಮ ಅಭಿವೃದ್ಧಿ ಆಗುವುದು ಉಪಯುಕ್ತ ಅಂಶ.
ಕೃಷಿಯಲ್ಲಿ ಬೆಳೆ-ವೈವಿಧ್ಯತೆ ಉಂಟಾಗಿ ಕೃಷಿಕರಿಗೆ ಆದಾಯದ ಇತರ ದಾರಿಗಳು ತೆರೆದುಕೊಳ್ಳುತ್ತವೆ.

ತಂತ್ರಜ್ಞಾನ ಮಾಹಿತಿ ಸಂಪನ್ಮೂಲ

ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ಬಯೋಡೀಸೆಲ್ ರಿಸೋರ್ಸ್ ಡೆವೆಲಪ್ಮೆಂಟ್ ಸೆಂಟರ್ ಇದೆ.
ಇದರಲ್ಲಿ ವಿಜ್ಞಾನಿಗಳು, ತಂತ್ರಜ್ಞರು, ಉದ್ಯಮಶೀಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಕೆಲಸ ಮಾಡುತ್ತಾರೆ, ಮಾತ್ರವಲ್ಲ ಅವರು ವಿಚಾರವನ್ನು ಸಾರ್ವಜನಿಕರಿಗೆ ತಿಳಿಸುತ್ತಾರೆ.
ಇದರಿಂದ ಇದರ ಉತ್ಪಾದನಾ ತಂತ್ರಜ್ಞಾನ ಕೇವಲ ಗೌಪ್ಯವಾಗಿ ಉಳಿದಿಲ್ಲ.
ಆದರೂ ಪೆಟ್ರೋಲಿಯಂ ತೈಲವನ್ನು ಬಳಸಿ ಅಭ್ಯಾಸವಾದ ಜನರು ಇದನ್ನು ಬಳಸಲು ಹೆದರುತ್ತಾರೆ. ಇದಕ್ಕಾಗಿ ವ್ಯಕ್ತವಾದ ಮಾಹಿತಿ ವಿನಿಮಯ ಅಗತ್ಯವಿದೆ.
ಭಾರತ ಸರ್ಕಾರ ನೀಡಿದ ಸೂಚನೆಯಂತೆ ಪ್ರತಿ ಡೀಸೆಲ್ ಕಾರ್ಖಾನೆಗಳು 5 ಶತಾಂಶ ಬಯೋಡೀಸೆಲ್, 20 ಶತಾಂಶ ಎಥೆನಾಲ್ ಡೀಸೆಲ್ ಗೆ ಸೇರಿಸಬಹುದು.

ದಕ್ಷಿಣ ಭಾರತದ ಸನ್ನಿವೇಶ

ಅಡಿಕೆಯ ಕೃಷಿ ಮಾಡುವ ಭಾಗಗಳಲ್ಲಿ ನೈಕುಳಿ, ನಾಣಿಲು ಎಂಬ ಸಸ್ಯಗಳಿಂದ ಬಯೋಡೀಸಲ್ ಉತ್ಪಾದನೆ ಸಾಧ್ಯ.
ಹೈದರಾಬಾದ್ ಮೂಲದ ಅಂಗಾಂಶ ಕಸಿ ಕಂಪನಿಯು ಬಿದಿರಿನ ಆರೇಳು ತಳಿಗಳನ್ನು ತಂದಿದೆ.
ಅದೇ ರೀತಿ ಸ್ವಿಚ್ ಗ್ರಾಸ್, ವಾಟೆ, ಬೆತ್ತ ಮೊದಲಾದವುಗಳಿಂದ ಆಲ್ಕೋಹಾಲ್ ಉತ್ಪಾದನೆ ಸಾಧ್ಯ.
ಪಾಮ್ ಎಣ್ಣೆಯನ್ನು ಬಳಸುವಂತೆ ಭಾರತದಲ್ಲಿ ಸಾಧ್ಯವಿಲ್ಲದಿದ್ದರೂ ಪಾಮ್ ಸ್ಟೀಯೆರಿನ್ ಎಂಬ ಬೈ ಪ್ರೊಡಕ್ಟ್ ಅನ್ನು ಉಪಯೋಗಿಸಬಹುದು.

ವಿಶ್ವದಲ್ಲಿ ಯುಎಸ್ಎ ಅಗ್ರಗಣ್ಯ ವಾಗಿ ಬಯೋಡೀಸಲ್ ಉತ್ಪಾದನೆಯಾಗುತ್ತದೆ ನಂತರ ಬ್ರೇಜಿಲ್ ಹಾಗೂ ಇಂಡೋನೇಷ್ಯಾ ಪ್ರಮುಖ ಬಯೋಡೀಸಲ್ ಉತ್ಪಾದನಾ ದೇಶಗಳು
ಇಂಡೋನೇಷಿಯಾದಲ್ಲಿ ಪಾಮ್ ಆಯಿಲ್ ಅನ್ನು ಬಯೋಡೀಸಲ್ ಉತ್ಪಾದನೆಗೆ ಉಪಯೋಗಿಸುತ್ತಾರೆ.
ಈ ಕಾರ್ಯಕ್ರಮದಲ್ಲಿ ಸಾಕಷ್ಟು ಕೃಷಿಕರ ಪಾತ್ರ, ಉದ್ಯಮಿಗಳ ಪಾತ್ರ, ವಾಹನಗಳ ಯೋಜನೆಗಳ ಕುರಿತ ಚರ್ಚೆಗಳು ನಡೆದವು.

ಕಾರ್ಯಕ್ರಮದ ಧ್ವನಿಮುದ್ರಣ ಸುರುಳಿಯನ್ನು ಈ ಕೊಂಡಿಯಿಂದ ಕೇಳಬಹುದು.

https://www.clubhouse.com/room/MRn867j3

Leave a Comment

Your email address will not be published. Required fields are marked *

Scroll to Top