ಜೇನು ವ್ಯವಸಾಯದೊಂದಿಗೆ ಅಡಿಕೆಯಲ್ಲಿ ಅಧಿಕ ಇಳುವರಿ

ಪಯಸ್ವಿನಿ.ಕಾಮ್ ವೇದಿಕೆಯಲ್ಲಿ ಕ್ಲಬ್ ಹೌಸ್ ಎಂಬ ಆ್ಯಪ್ ಬಳಸಿ ಜೇನುಕೃಷಿಯ ಒಂದು ಆವೃತ್ತಿ ಮೀಟಿಂಗ್ 10-10-2021 ಭಾನುವಾರ ಸಂಜೆ 6 ಗಂಟೆಯಿಂದ 8.30 ಗಂಟೆಯ ತನಕ ಜರಗಿತು.

ಅದರಲ್ಲಿ ವಿವಿಧ ರೀತಿಯ ಜೇನುನೊಣಗಳು, ವಿವಿಧ ಜೇನುಪೆಟ್ಟಿಗೆಗಳು, ಕುಟುಂಬಗಳ ಅಭಿವೃದ್ಧಿ ರೀತಿ, ಪಾಲು ಮಾಡುವುದು, ಜೇನಿನ ಸಂಸ್ಕರಣೆ, ಮುಂತಾದ ವಿಷಯದಲ್ಲಿ ಸಂವಾದ ನಡೆದಿದೆ.

ಸಾವಯವ ಕೃಷಿಯಿಂದ ಜೇನು ವ್ಯವಸಾಯಕ್ಕೆ ಪ್ರಯೋಜನ, ಜೇನಿಗೆ ಬರುವ ಕೀಟ ಹಾಗೂ ರೋಗಗಳ ನಿರ್ವಹಣೆ ಕೂಡ ಚರ್ಚಿಸಲಾಗಿದೆ.

ಮುಖ್ಯ ಸಂಪನ್ಮೂಲ ವ್ಯಕ್ತಿಗಾಗಿ ಈ ಕೆಳಗಿನ ನುರಿತ ಕೃಷಿಕರೂ, ವಿಜ್ಞಾನಿಗಳೂ ಭಾಗವಹಿಸಿದರು:

  1. ಶ್ರೀ ವಾದ್ಯಕೋಡಿ ಶಾಮ್ ಭಟ್, ಮೊಬೈಲ್ : +919449103260
  2. ಶ್ರೀ ಕೃಷ್ಣ ಭಟ್ ಶಿರಂಕಲ್ಲು, ಮೊಬೈಲ್ : +919481756203
  3. ಶ್ರೀ ನಿಡ್ಪಳ್ಳಿ ರಾಧಾಕೃಷ್ಣ, ಮೊಬೈಲ್ : +917975191724
  4. ಶ್ರೀ ಉಮೇಶ್ ಜೋಷಿ, ಮೊಬೈಲ್ : +919481915705
  5. ಡಾ. ವಿಜಯಕುಮಾರ್, ಬೆಂಗಳೂರು, ಮೊಬೈಲ್ : 9986051852
  6. ಕೇಶವ ಕೃಷ್ಣ ಶರ್ಮ, ಪುಣಚ, ಮೊಬೈಲ್ : +919900315766
  7. ವಿನಯ್ ಹೆಗ್ಡೆ (ಪರ್ವ ಮಲ್ನಾಡ್), ಮೊಬೈಲ್ : +919481351098

ಸಾವಯವ ಹಾಗೂ ಸಂಸ್ಕರಣೆ

ಸಾವಯವ – ಸ್ವದೇಶೀ – ಸ್ವಾವಲಂಬನೆಯ ಶಿಕ್ಷಣ ಜೇನು ನೊಣಗಳಿಂದ ತಿಳಿಸಲ್ಪಡುತ್ತದೆ ಎನ್ನುತ್ತಾರೆ ಶಾಮ ಭಟ್ಟರು. ಅವರು ಸಾವಯವ ಜೇನು ಕೃಷಿಯಲ್ಲಿ ಕೀಟನಾಶಕ ನಿಷೇಧ ಹಾಗೂ ಸಾವಯವ ಕೃಷಿರೀತಿ ಅದರೊಂದಿಗೆ ಜೇನು ಇದನ್ನು ನೆಚ್ಚಿಕೊಂಡು ಉತ್ತಮ ಗುಣಮಟ್ಟದ ಜೇನು ಉತ್ಪಾದನೆ ಮಾಡುತ್ತವೆ. ಉತ್ತಮ ಗುಣಮಟ್ಟದ ಜೇನು ಅದಕ್ಕೆ ಉಪಯೋಗಿಸುವ ಮಕರಂದ, ಪರಾಗ ಹಾಗೂ ಹವಾಮಾನಕ್ಕೆ ಅನುಗುಣವಾಗಿರುತ್ತವೆ. ಜೇನಿನಲ್ಲಿ ಕಡಿಮೆ ನೀರಿನ ಅಂಶ ಹಾಗು ಉತ್ತಮ ಫ್ರಕ್ಟೊಸ್ ಮತ್ತು ಔಷಧೀಯ ಗುಣಗಳಿಂದ ಅದರ ಗುಣಮಟ್ಟ ಹಾಗು ಮೌಲ್ಯ ನಿರ್ಧಾರ ವಾಗುತ್ತದೆ. ಸಂಸ್ಕರಣೆಯಿಂದ ನೀರಿನ ಅಂಶ ನೀಗಿಸಿ ಜೇನನ್ನು ಉಳಿಸಿಕೊಳ್ಳಬಹುದು ಎಂದು ಶ್ರೀ ಶ್ಯಾಮ ಭಟ್ಟರು ಅಭಿಪ್ರಾಯ ಪಟ್ಟರು.
ಅವರ ಮಾತುಗಳನ್ನು ಈ ಕೆಳಗಿನ ಲಿಂಕ್ ಮೂಲಕ ನೀವು ನೇರವಾಗಿ ಕೇಳಬಹುದು.

Honebee_pollen

ಪರಕೀಯ ಪರಾಗಸ್ಪರ್ಶ ತೋಡವೇ ಜೇನಿನ ಚಟುವಟಿಕೆ

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಶ್ರೀ ಶಿರಂಕಲ್ಲು ಕೃಷ್ಣ ಭಟ್ ಅವರು ತೊಡವೆ ಜೇನಿನಿಂದ ಅಡಿಕೆಯ ಇಳುವರಿ 25-30 ಶತಾಂಶ ವೃದ್ಧಿಸುತ್ತದೆ. ಇದರಿಂದ ಲಭಿಸುವ ಲಾಭ ಗಮನಾರ್ಹ. ಆದ್ದರಿಂದ ಪರಕೀಯ ಪರಾಗಸ್ಪರ್ಶದ ಪ್ರಾಮುಖ್ಯತೆ ಇರುವ ಅಡಿಕೆ ಬೆಳೆಯಲ್ಲಿ ಪ್ರತಿಯೊಬ್ಬರೂ ಜೇನು ಸಾಕಣೆ ಮಾಡುವುದು ಮುಖ್ಯ, ಎಂದರು.
ಜೇನಿನ ಹುಳಗಳಿಗೆ ಮಕರಂದದ ಜೊತೆಗೆ ಪರಾಗದಲ್ಲೂ ಒಲವು ಇದ್ದು ಅವುಗಳು ಕಾಲಿನ ಪರಾಗ ಚೀಲಗಳಲ್ಲಿ ಇವನ್ನು ತುಂಬುವ ಸಂದರ್ಭದಲ್ಲಿ ಹಾಗೂ ಹೂವಿಂದ ಹೂವಿಗೆ ಭೇಟಿ ನೀಡುತ್ತಾ ಪರಾಗ ಸ್ಪರ್ಶ ನಡೆಸುವುದು ಪ್ರಯೋಜನವಾಗುತ್ತದೆ. ಜೇನು ನೊಣಗಳು ಒಂದು ಜಾತಿಯ ಸಸ್ಯಕ್ಕೆ ಭೇಟಿ ಆರಂಭಿಸಿದರೆ ಅದೇ ಜಾತಿಯಲ್ಲಿ ಆಸಕ್ತಿಹೊಂದಿ ಅದನ್ನೇ ಹೂಗಳು ಇರುವಷ್ಟು ಕಾಲ ಅವಲಂಬಿಸುತ್ತವೆ. ಅಡಿಕೆಯ ಮರಗಳ ಹೂ ಬಿಡುವಿಕೆಯೂ ಜೇನಿನ ನೊಣಗಳ ಚಟುವಟಿಕೆಯೂ ಕಾಲ ಹೊಂದಾಣಿಕೆ ಇದ್ದು ಪೂರಕ ಎಂದು ನುಡಿದರು.
ಒಂದು ಎಕ್ರೆ ತೋಟದಲ್ಲಿ ಸುಮಾರು 10-15 ರಷ್ಟು ಪೆಟ್ಟಿಗೆಗಳನ್ನು ವ್ಯಾಪಕವಾಗಿ ಇರಿಸುವುದೂ, ಅಂತೆಯೇ ಸಾಮಾನ್ಯ ಪ್ರತೀ ಕಿಲೋಮೀಟರ್ ಅಂತರದಲ್ಲಿ ಈ ರೀತಿ ಪೆಟ್ಟಿಗೆಗಳನ್ನು ಇರಿಸಬಹುದು ಎಂದೂ ಅಭಿಪ್ರಾಯಪಟ್ಟರು.
ಅವರ ಮಾತುಗಳನ್ನು ಈ ಕೆಳಗಿನ ಲಿಂಕ್ ಮೂಲಕ ನೀವು ನೇರವಾಗಿ ಕೇಳಬಹುದು.

ವಿನಯ್ ಹೆಗ್ಡೆ (ಪರ್ವ ಮಲ್ನಾಡ್) ಅವರಿಂದ ಜೇನಿನ ಕುಟುಂಬ ಹಾಗೂ ಪಾಲು ಮಾಡುವಿಕೆಯ ಪರಿಚಯ ವಿಡಿಯೋ

Queen_bee

ಜೇನುಕುಟುಂಬಗಳನ್ನು ಅಭಿವೃದ್ಧಿಪಡಿಸುವುದು

ತೋಡವೇ ಜೇನಿನ ಕುಟುಂಬದಲ್ಲಿ ರಾಣಿ ನೊಣ, ಕೆಲಸಗಾರ ಹುಳುಗಳು ಹಾಗೂ ಗಂಡುಹುಳುಗಳು ಇವೆ. ಮೊಟ್ಟೆಗಳು, ಕಡ್ಡಿ ಮೊಟ್ಟೆಗಳೂ ಇವೆ. ಅಭಾವ ಕಾಲದಲ್ಲಿ ರಾಣಿಯು 10 ಮೊಟ್ಟೆ ಇಟ್ಟರೆ ಸಾಕಷ್ಟು ಆಹಾರ ಸಿಗುವಾಗ 1500 ರ ತನಕ ಮೊಟ್ಟೆ ಇಡುತ್ತದೆ. ಇವುಗಳ ಬಗ್ಗೆ ಒಂದಷ್ಟು ಉತ್ತಮ ತಿಳುವಳಿಕೆ ಅಗತ್ಯ. ಜೇನು ಗೂಡಿನಿಂದ ಕೇವಲ ಪರಾಗ ಸಂಪರ್ಕ ಮತ್ತು ಜೇನು ಸಂಗ್ರಹ ಅಷ್ಟೇ ಅಲ್ಲ, ಜೇನು ಮೇಣ, ರಾಜಶಾಹೀ ರಸ, ಜೇನಿನ ಕುಟುಂಬ ಇವುಗಳ ವ್ಯವಹಾರ, ಇವೆಲ್ಲವೂ ಲಾಭದಾಯಕ ಹಾಗೂ ಕೃಷಿಯಲ್ಲಿ ಅವಿಭಾಜ್ಯ ಘಟಕಗಳಾಗಿರುತ್ತವೆ.
ಕುಟುಂಬ ಅಭಿವೃದ್ಧಿ, ಜೇನು ಉತ್ಪಾದನೆ ಹಾಗು ಕುಟುಂಬ ಆರೈಕೆ (ನಿರ್ವಹಣೆ)ಯ ಕಾಲಗಳಲ್ಲಿ ಪ್ರತಿಯೊಂದೂ ಅತೀ ಮುಖ್ಯ.
ಶ್ರೀ ರಾಧಾಕೃಷ್ಣ ನಿಡ್ಪಳ್ಳಿ ಇವರು ಜೇನುಕುಟುಂಬಗಳನ್ನು ಯಾವ ರೀತಿಯಲ್ಲಿ ಬರ ಮಾಡಿಕೊಳ್ಳಬಹುದು ಹಾಗೂ ಅದನ್ನು ಅಭಿವೃದ್ಧಿಪಡಿಸಲು ಪಾಲು ಮಾಡಬಹುದು ಈ ಕುರಿತಾಗಿ ಸವಿವರವಾಗಿ ತಿಳಿಸಿಕೊಟ್ಟರು ಅವರ ಮಾತುಗಳನ್ನು ಈ ಕೆಳಗಿನ ಲಿಂಕ್ ಮೂಲಕ ನೀವು ನೇರವಾಗಿ ಕೇಳಬಹುದು.
ಧ್ವನಿ ಸುರುಳಿಯನ್ನು ಕೇಳಲು ಪ್ಲೇ ಒತ್ತಿ – ಸಮಯ ಧೈರ್ಘ್ಯ 1 ಗಂಟೆ 2 ನಿಮಿಷಗಳು.

ಮಲೆನಾಡು ಹಾಗು ಬಯಲು ಸೀಮೆಯ ಜೇನು ಕೃಷಿ

ಶ್ರೀ ಉಮೇಶ್ ಜೋಷಿಯವರ ಪ್ರಕಾರ ಕೇರಳ ಜೇನು ನೊಣ, ಮಲೆನಾಡ ಜೇನು ನೊಣ ಹಾಗೂ ಬಯಲುಸೀಮೆಯ ಜೇನು ನೊಣಗಳೆಂದು ವರ್ಗಿಕರಿಸಬಹುದು. ಕೇರಳ ನೊಣಗಳು ಹೆಚ್ಚು ಕೆಲಸಮಾಡುತ್ತವೆ ಅದೇ ರೀತಿ ಚುಚ್ಚುತ್ತವೆ.
ಇನ್ನು ನಮಗೆ ಕೃಷಿಕರ ಸಂಶಯಗಳ ಪರಿಹಾರ, ಆಮೇಲೆ ವ್ಯವಹಾರ ರೀತಿ ಕೃಷಿಕ ಉತ್ಪಾದನಾ ಸಂಘ ಹಾಗೂ ಮುಜಂಟಿ ಜೇನುನೊಣ ಇದರ ಕುರಿತು ಕಾರ್ಯಕ್ರಮ ಆಗಬೇಕಾಗಿದೆ.
ಮಳೆಗಾಲದಲ್ಲಿ ಜೇನುನೊಣಗಳನ್ನು ಸಾಕುವುದು ಕಷ್ಟ ಅವುಗಳಿಗೆ ಈ ಸಮಯದಲ್ಲಿ ಆಹಾರದ ಇವರ ಕೊರತೆಯುಂಟಾಗುತ್ತದೆ ಮಾತ್ರವಲ್ಲ ಈ ಸಮಯದಲ್ಲಿ ಕಣಜ, ಕೆಂಪಿರುವೆ ಕಾಟ ಇದೆ. ಮಳೆಗಾಲದಲ್ಲಿ ಸಕ್ಕರೆ ಪಾಕ ಹೆಚ್ಚಿನ ಆಹಾರವಾಗಿ ನೀಡಬೇಕು. ಆಗ ಕುಟುಂಬ ಚೆನ್ನಾಗಿ ಬೆಳೆದು ನವೆಂಬರ್ ತಿಂಗಳಲ್ಲಿ ಪಾಲು ಮಾಡಿ ಅಭಿವೃದ್ಧಿ ಮಾಡಬಹುದು.
ಅವರ ಮಾತುಗಳನ್ನು ಹಾಗೂ ಪರ್ವ ಮಲ್ನಾಡು ಇವರ ಸಲಹೆಗಳನ್ನು ಕೇಳಿ – ಧ್ವನಿ ಸುರುಳಿ ಆಲಿಸಿ. ಈ ಕೆಳಗಿನ ಲಿಂಕ್ ಮೂಲಕ ನೀವು ನೇರವಾಗಿ ಕೇಳಬಹುದು.

ರೋಗ ಹಾಗೂ ಕೀಟಗಳಿಂದ ಜೇನು ಕುಟುಂಬ ಸಂರಕ್ಷಣೆ

ಡಾ. ಕೆ.ಟಿ. ವಿಜಯಕುಮಾರ್, ಸಹ ಪ್ರಾಧ್ಯಾಪಕರು, ಜಿಕೆವಿಕೆ ಬೆಂಗಳೂರು ಇವರು ಮಯಣದ ಪತಂಗ (ಹುಳ), ಥಾಯ್ ಸ್ಯಾಕ್ ಬ್ರೂಡ್ ರೋಗ, ಶಿಲೀಂಧ್ರ ರೋಗ ಹಾಗೂ ಕಣಜ, ಕೆಂಪಿರುವೆ ಮುಂತಾದವುಗಳ ಕಾಟದ ಪರಿಣಾಮ, ಅದರಿಂದ ಪಾರಾಗುವ ಸಾವಯವ ಸೂತ್ರಗಳನ್ನು ವಿವರಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಸಾಕಷ್ಟು ಚರ್ಚೆಗಳು, ಅನುಭವಗಳು ಹಂಚಿಕೊಳ್ಳಲು ಅವಕಾಶವಿತ್ತು. ಇವುಗಳಲ್ಲಿ ಮುಖ್ಯವಾದವುಗಳು.

ರೋಗ, ಕೀಟ, ಬಾಧೆಗಳ ನಿರ್ವಹಣೆಯ ಸಂಶೋಧನಾ ಆಧಾರಿತ ಸಂಪನ್ಮೂಲ ಸಂವಹನಾ ಧ್ವನಿ ಸುರುಳಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕೇಶವಕೃಷ್ಣ ಶರ್ಮರ ಜೇನು ವ್ಯವಸಾಯ ಸಹಕಾರ ಸಂಘದ ಪೂರಕ ಪ್ರವೃತ್ತಿ ಹಾಗೂ ಸಾಂಕೇತಿಕ ಅನುಭವಗಳನ್ನು ಇಲ್ಲಿ ಕ್ಲಿಕ್ಕಿಸಿ ಆಲಿಸಿರಿ.


ಈ ಕಾರ್ಯಕ್ರಮದಲ್ಲಿ ಸುಮಾರು 200 ಜನ ಭಾಗವಹಿಸಿದ್ದರು.

ನಿಮ್ಮ ಅಭಿಪ್ರಾಯ ಹಾಗೂ ಪೂರಕ ಮಾಹಿತಿಯನ್ನು ಈ ಕೆಳಗೆ ಕಾಮೆಂಟ್ ಸೇರಿಸಿ ಜೇನು ವ್ಯವಸಾಯಕ್ಕೆ ಕೈಜೋಡಿಸಿ.

Leave a Comment

Your email address will not be published. Required fields are marked *

Scroll to Top