ರೋಗ ಪ್ರತಿರೋಧಕ ಗುಡ್ಡೆ ಕೇಪುಳ ಹೂವಿನ ತಂಬುಳಿ

ತಂಬುಳಿಗಳು ಅಪರೂಪದ ಪದಾರ್ಥಗಳು ಕೂಡ ಆಗಿದ್ದು ಒಮ್ಮೊಮ್ಮೆ ವ್ಯತ್ಯಸ್ತವಾದ ಊಟಕ್ಕೆ ರುಚಿಕರವಾಗಿರುವುದರಲ್ಲಿ  ಸಂಶಯವಿಲ್ಲ. ದೈನಂದಿನ ಊಟಕ್ಕೂ ಸಮಾರಂಭಗಳಿಗೂ ಏಕರೂಪದಲ್ಲಿ ಮೆಚ್ಚಲ್ಪಡುವಂತಹ ತಂಬುಳಿಗಳು ವಿಶಿಷ್ಟ ಅಡುಗೆ ಎನಿಸಿಕೊಂಡಿವೆ.

ಈ ತಂಬುಳಿಗಳು ಖಂಡಿತವಾಗಿಯೂ ಒಳ್ಳೆ ಆರೋಗ್ಯಕರ ಪದಾರ್ಥಗಳು. ಯುವಪೀಳಿಗೆ ಸುಲಭವಾಗಿ ಮಾಡಲು ಸಾಧ್ಯ.

ಬೇಕಾಗುವ ಸಾಮಾಗ್ರಿಗಳು:

  1. ಒಂದು ಹಿಡಿ ಕೇಪುಳದ ಹೂವು
  2. ನಾಲ್ಕು ಸ್ಪೂನ್ ತೆಂಗಿನಕಾಯಿ ತುರಿ
  3. ಒಂದು ಚಿಟಿಕೆ ಜೀರಿಗೆ
  4. ಒಂದು ಕುಡ್ತೆ ಸಿಹಿ ಮಜ್ಜಿಗೆ ಅಥವಾ ಮೊಸರು.

ಮಾಡುವ ವಿಧಾನ:

  • ಕೇಪುಳ ಹೂವನ್ನು ತೊಳೆದು ಶಲಾಕೆಯಲ್ಲಿರುವ ಕುಸುಮವನ್ನು ಒಂದೊಂದರಿಂದಲೇ ಬೇರ್ಪಡಿಸಿ ಸ್ವಚ್ಛ ಮಾಡಿಕೊಳ್ಳಿರಿ.
  • ತೆಂಗಿನಕಾಯಿ ತುರಿ, ಜೀರಿಗೆಯೊಂದಿಗೆ ಹೂವನ್ನು ನುಣ್ಣಗೆ ರುಬ್ಬಿ ರುಚಿಗೆ ತಕ್ಕಷ್ಟು ಉಪ್ಪು, ಮಜ್ಜಿಗೆ ಬೆರೆಸಿದರೆ ರುಚಿಯಾದ ಸರಳ ತಂಬುಳಿ ರೆಡಿ.
  • ಒಣ ಮೆಣಸು, ಎಣ್ಣೆ, ಸಾಸಿವೆಕಾಳುಗಳ ಒಗ್ಗರಣೆಯೊಂದು ಚಟಾಯಿಸಿದರೆ, ಇದೊಂದು ಸಂಪೂರ್ಣ ಪದಾರ್ಥವಾಗುತ್ತದೆ.

ಇದು ಸಾವಯವ ಹಾಗೂ ರೋಗ ನಿರೋಧಕ ಶಕ್ತಿಯುಳ್ಳದ್ದಲ್ಲದೆ, ಜೀರ್ಣ ಶಕ್ತಿ ಹೆಚ್ಚಿಸಿ ದೇಹಕ್ಕೆ ತಂಪು ಎಲ್ಲಾ ರೀತಿಯಿಂದಲೂ ಹಿತಕರ.
ಇದೇ ರೀತಿ ಹಲವು ಚಿಗುರುಗಳನ್ನು ಸೇರಿಸಿ ಮಾಡುವಂತಹ ತಂಬುಳಿ ಕೂಡ ಅತ್ಯಂತ ರುಚಿಕಟ್ಟಾದ ಒಂದು ಪದಾರ್ಥ.

 ಈ ತಂಬುಳಿಗಳನ್ನು ತಯಾರುಗೊಳಿಸಿದ ಹಾಗೆಯೇ ಉಪಯೋಗಿಸಬಹುದು ಮತ್ತು ಕುದಿಸಿ ಒಂದು ದಿವಸದವರೆಗೆ ಉಳಿಸಿ ಉಪಯೋಗಿಸಬಹುದು.

– ವಿಜಯಾ ಸುಬ್ರಹ್ಮಣ್ಯ, ಕುಂಬಳೆ.

ಈ ಮೈಲ್: vijikarthikeya@gmail.com

Leave a Comment

Your email address will not be published. Required fields are marked *