ಪನೀರ್ ತಯಾರಿ ಹಾಲು ಪೋಲಾಗದಂತೆ ಇರಿಸಲು ಉತ್ತಮ ವಿಧಾನ

Muralikrishna

By hmkrishna

ಹಾಲು ಅಮೂಲ್ಯವಾದ ಸಂಪನ್ಮೂಲ. ಅದು ಉಳಿಕೆಯಾಗುವ ಅಂತಹ ಸಂದರ್ಭದಲ್ಲಿ ಹಾಳು ಮಾಡಿಕೊಳ್ಳದಿರಿ.

ಮನೆಯಲ್ಲಿಯೇ ಹಾಲಿನಿಂದ ಖೋವಾ, ಪನೀರ್, ಮೊಸರು, ತುಪ್ಪ, ಮುಂತಾದುವನ್ನು ಮಾಡಿ ನಷ್ಟವನ್ನು ತಡೆಯಬಹುದು.

ಬೇಕಾಗುವ ಮೂಲ ವಸ್ತು ಮತ್ತು ಸಲಕರಣೆಗಳು
ಎರಡು ಲೀಟರ್ ನೈಜ ಹಾಲು
ಸಾಕಷ್ಟು ಶುದ್ಧ ನೀರು
3 ನಿಂಬೆಹಣ್ಣು ಅಥವಾ 3 ಟೀ ಸ್ಪೂನ್ ವಿನೆಗರ್
ಸೋಸುವ ಬಟ್ಟೆ
ಹೀಟರ್
ಫ್ರಿಡ್ಜ್
ಪಾತ್ರೆಗಳು
ಚೂರಿ, ಇತ್ಯಾದಿ.

ಪನೀರ್ ಮಾಡುವ ವಿಧಾನ

  1. ಎರಡು ಲೀಟರ್ ಹಾಲಿಗೆ 2 ಲೀಟರ್ ಶುದ್ಧ ನೀರು ಸೇರಿಸಿ ಕುದಿಸಿ. ಹದಿ ಗಟ್ಟಲು ಬಿಡಬಾರದು.
  2. ಕುದಿಯುತ್ತಿರುವಾಗ ಅದಕ್ಕೆ ಮೂರು ನಿಂಬೆಹಣ್ಣಿನ ರಸ ಸೇರಿಸಿ ಕದಡಿರಿ. ನಿಂಬೆರಸದ ಬದಲಿಗೆ ವಿನೆಗರ್ ಕೂಡ ಆಗುತ್ತದೆ. ಇವ್ಯಾವುವೂ ಇಲ್ಲದಿದ್ದರೂ ಸ್ವಲ್ಪ ಮಜ್ಜಿಗೆಯನ್ನು ಹಾಕಬಹುದು. ಹಾಲು ಒಡೆದು ನೀರು ಬೇರೆಯಾಗುತ್ತದೆ.
  3. ಬಿಸಿ ಆರುತ್ತಿರುವಂತೆಯೇ ಅದನ್ನು ಒಂದು ಹತ್ತಿಯ ನೂಲಿನ ವೇಶ್ಟಿಯ ಮೇಲೆ ಸುರಿದು ಆದರ ಹನಿ ನೀರನ್ನು ಸೋಸಿ ತೆಗೆಯಿರಿ. ನೀರನ್ನು ಸಂಪೂರ್ಣ ಹಿಂಡಿ ತೆಗೆಯಬೇಕು. ಎತ್ತರಕ್ಕೆ ಕಟ್ಟುವುದರಿಂದ ಕೊನೆಯ ಹನಿ ಕೂಡ ಹರಿದುಹೋಗುವುದು.
  4. ತಣ್ಣಗಾದ ಈ ಪನೀರನ್ನು ಶುದ್ಧ ನೀರಿನಿಂದ ತೊಳೆಯಬೇಕು. ನಂತರ ನೀರು ಸೋಸಿ ತೆಗೆದು ಚೆನ್ನಾಗಿ ಹಿಂಡಿ ಸೆಟ್ ಮಾಡಬೇಕು. ಇದಕ್ಕಾಗಿ ಚೆನ್ನಾಗಿ ಹಿಂಡಿದ ಹಿಟ್ಟನ್ನು ಎರಡು ಮಣೆಗಳ ಮಧ್ಯೆ ಇಟ್ಟು ಒತ್ತಬಹುದು ಅಥವಾ ಒಂದು ಚಿಕ್ಕ ತಪಲೆಯ ಬೆನ್ನು ಮೇಲೆ ಪನೀರನ್ನು ಇಟ್ಟು ಅದಕ್ಕೆ ದೊಡ್ಡ ತಪಲೆ ಕಿವುಚಿ ಹಾಕಿ ಒತ್ತಬಹುದು. ಯಾವುದಾದರೂ ವಿಧಾನವನ್ನು ಅನುಕೂಲಕ್ಕೆ ತಕ್ಕಂತೆ ಅನುಸರಿಸಿ ಅದರಿಂದ ಸಂಪೂರ್ಣವಾಗಿ ಘನ ಪನೀರ್ ಮಾಡಬಹುದು.
  5. ಅರ್ಧಗಂಟೆಯ ನಂತರ ಅದನ್ನು ಬಟ್ಟೆಯಿಂದ ಹೊರತೆಗೆದು ಬೇಕಾದ ಆಕಾರದಲ್ಲಿ ಕತ್ತರಿಸಿ ಫ್ರಿಜ್ ನಲ್ಲಿ ಇರಿಸಬಹುದು.

ಪನೀರ್ ಪ್ರೋಟೀನ್ ಯುಕ್ತ ಆಹಾರ. 100 ಗ್ರಾಂ ಪನೀರ್ ನಲ್ಲಿ ಸುಮಾರು 18 ಗ್ರಾಂ ಪ್ರೋಟೀನ್, 15 ಗ್ರಾಂ ಕೊಬ್ಬು, ಸಾಮಾನ್ಯ ಅಷ್ಟೇ ಪಿಷ್ಟ, ಸುಮಾರು 500 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಆದುದರಿಂದ ಇದೊಂದು ಪೋಷಕ ಆಹಾರ.

ಈ ರೀತಿ ಪನೀರ್ ಮಾಡಿಕೊಳ್ಳುವುದರಿಂದ ಹಾಳಾಗುವ ಹಾಲನ್ನು ಸುಲಭವಾಗಿ ಶೇಖರಿಸಬಹುದು. ಒಂದು ಲೀಟರ್ ನಿಂದ ಸುಮಾರು 200 ಗ್ರಾಂ ಪನೀರ್ ಸಿಗುತ್ತದೆ. ಆದ್ದರಿಂದ ಇದನ್ನು ಶೇಖರಿಸಲು ಕಡಿಮೆ ಜಾಗ ಸಾಕು.

ಈ ಪನೀರ್ ನ್ನು ಪನೀರ್ ಮಸಾಲ ಹಾಗೂ ಇತರ ಪದಾರ್ಥಗಳನ್ನು ಮಾಡಲು ಉಪಯೋಗಿಸಬಹುದು. ಇದಕ್ಕೆ ಪೇಟೆಗಳಲ್ಲಿ ಹೋಟೆಲ್ ನಲ್ಲಿ ಸಾಕಷ್ಟು ಗಿರಾಕಿಯ ಸಿಗಬಹುದು. ಹೀಗೆ ಮಾಡುವುದರಿಂದ ಕೆಲವೇ ಗಂಟೆಗಳಲ್ಲಿ ಹಾಳಾಗುವ ಹಾಲನ್ನು ಮೂರು ನಾಲ್ಕು ದಿವಸ ದಷ್ಟು ಫ್ರಿಜ್ಜಿನಲ್ಲಿ ವ್ಯವಸ್ಥೆಯಾಗುತ್ತದೆ. ಫ್ರಿಜ್ಜಿನಲ್ಲಿ ಇರಿಸಿದರು ಒಂದು ವಾರಕ್ಕಿಂತ ಹಳೆಯ ಪನೀರ್ ಯೋಗ್ಯವಲ್ಲ.

ಟ್ರೈ ಮಾಡಿನೋಡಿ, ಅಭಿಪ್ರಾಯ ಹಂಚಿಕೊಳ್ಳಿ.

By Jnathri H.
E-mail: jnathrih@gmail.com