ಚೀನಾವು ಪರಂಪರೆಯನು ಬಿಟ್ಟಾಗ
(ಪ್ರಾ)ಚೀನ ಪರಂಪರೆಯನು ಬಿಟ್ಟಾಗ
ಸ್ವಾರ್ಥ, ದುರಾಸೆಯು ಹೆಚ್ಚಾಯಿತು
ನಡೆದದ್ದೆ ದಾರಿಯೆಂಬ ತತ್ವವನು ಹಿಡಿಯಲು
ಬಾಯಿಯ ರುಚಿಯು ಬದಲಾಯಿತು
ಜೀವ-ಜೀವಿಗಳ ಮಾರಣ ಹೋಮ ಶುರುವಾಯಿತು|
ಲಾಭವನು ಬಯಸಿದರು
ಕೃತಕ ಆಹಾರವನು ಬೆಳೆಸಿದರು
ತಿಂದರು, ತಿನಿಸಿದರು, ತೇಗಿದರು
ಜೀವನ ಶೈಲಿಯನು ಬದಲಿಸಿದರು
ಧರಣಿಯೆಲ್ಲೆಡೆ ವೈರಾಣು ಹರದಡಿಸಿದರು
ಸ್ವಾರ್ಥ-ನಿಸ್ವಾರ್ಥ ಜೀವಿಗಳ ಬಲಿಗಳೂ ನಡೆದರೂ,
ಕೈ ಕಟ್ಟಿ ಸುಮ್ಮನೆ ಕುಳಿತುಕೊಂಡರು||