ಹಣ್ಣಿನ ಕವನಗಳು

juice-bottles
two-mangoes

ಮಾವಿನ ಹಣ್ಣು

ಮನೆಯ ಅಂಗಳದ ಬದಿಯಲಿ
ಒಂದು ಮಾವಿನ ಮರವಿದೆ
ಈ ವರ್ಷ ಅದರಲ್ಲಿ
ಎರಡೇ-ಎರಡು ಹಣ್ಣಿದೆ |

ಆ ಎರಡು ಹಣ್ಣಿಗಾಗಿ
ಹಗಲಿರುಳು ಕಾಯುವೆನು
ಕವಣೆ, ಕಲ್ಲು ಹಿಡಿದುಕೊಂಡು
ರಕ್ಷಣೆಯನು ಮಾಡುವೆನು |

ಹಣ್ಣು ಕೆಳಗೆ ಬೀಳುವಾಗ 
ಮಣ್ಣು ತಾಗಬಾರದೆಂದು
ಕಂಬಗಳನು ಹಾಕಿ ನಾನು
ಬಲೆಯನ್ನು ಕಟ್ಟುವೆನು |

ಆ ಎರಡು ಹಣ್ಣುಗಳನ್ನು
ತೊಳೆದುಕೊಂಡು ಬರುವೆನು
ಮನೆಯವರಿಗೆ ಪಾಲು ಕೊಟ್ಟು
ನಾನು ಕೂಡಾ ತಿನ್ನುವೆನು |

ಪೇರಳೆ ಹಣ್ಣು

ಅಣ್ಣನು ನೆಟ್ಟ ಪೇರಳೆ ಗಿಡವು
ತಮ್ಮನ ತೋಟಕೆ ಬಾಗುತ ಬೆಳೆಯಿತು.
ಅಣ್ಣನು ಗೊಬ್ಬರ-ನೀರನು ಎರೆದನು
ಕೀಟ ನಿಯಂತ್ರಣ ಮಾಡಿದನು ತಮ್ಮನು|

ಅಣ್ಣನು ಗಿಡಕೆ ಬೇಲಿಯ ಹಾಕಿದ
ತಮ್ಮನು ಫಲವನು ರಕ್ಷಣೆ ಮಾಡಿದ
ಹಣ್ಣಾಯಿತು ಗಿಡದಲಿ ಪೇರಳೆಯೆರಡು
ಹಂಚುತ ತಿಂದರು ಅಣ್ಣ-ತಮ್ಮಂದಿರು||

– ಅನಂತ ಕೃಷ್ಣ ಕರುವಂಕಲ್ಲು

Leave a Comment

Your email address will not be published. Required fields are marked *

Scroll to Top