ಎರಡನೆಯ ಚಂದ್ರಯಾನ ಭಾಗಶಃ ಸಾಫಲ್ಯ

ಚಂದ್ರಯಾನ-2, ಜುಲಾಯಿ 22ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ನಿಂದ ವಿಕ್ಷೇಪಿಸಲ್ಪಟ್ಟು ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ ಲ್ಯಾಂಡಿಂಗ್ ಸ್ಥಳಾಂತರಗೊಂಡಿದೆ ಮತ್ತು ಸಂವಹನ ಕಳೆದುಹೋಗಿದೆ. ಆಗಲೂ ಸಹ, ಇದು ಇಸ್ರೋ ಸಂಸ್ಥೆಗಷ್ಟೇ ಅಲ್ಲ ಭಾರತೀಯರಿಗೆಲ್ಲ ಹೆಮ್ಮೆಯ ಪ್ರಯೋಗವಾಗಿದೆ.

ಚಂದ್ರಯಾನವನ್ನೊಯ್ದುದು ಜಿಎಸ್ಎಲ್ವಿ ಮಾರ್ಕ್ 3 ಉಡಾವಣಾ ನೌಕೆ

ಜಿಎಸ್ಎಲ್ವಿ ಇಂದು ಭಾರತದ ಆದಾಯಕರ ಉದ್ಯಮವಾಗಿದೆ. ಈಗ ಹಲವಾರು ರಾಷ್ಟ್ರಗಳು ತಮ್ಮ ಉಪಗ್ರಹಗಳನ್ನು ಭಾರತದಲ್ಲಿ ಕೋಟಿಗಟ್ಟಲೆ ತೆತ್ತು ವಿಕ್ಷೇಪಿಸುತ್ತವೆ.

ಚಂದ್ರಯಾನ ಆಬರ್ಿಟ ಚಂದ್ರನಿಗೆ 100 ಕಿ.ಮೀ. ಎತ್ತರದಲ್ಲಿ ಸುತ್ತುಹಾಕುತ್ತಿರುವುದು.

Diagram Courtesy: ISRO Website

ಅಲ್ಲಿಂದ ಚಂದ್ರನ ಮೇಲ್ಮೈಯಲ್ಲಿ ತಲುಪಿದ ನೌಕೆ `ವಿಕ್ರಮ’

ವಿಕ್ರಂ ನೌಕೆಯು ನಿಧಾನಗತಿಯಲ್ಲಿ ಚಂದ್ರನಲ್ಲಿ ರೋವರನ್ನು ಇಳಿಸಬೇಕಾಗಿತ್ತು.

ಚಂದ್ರನಮೇಲಿನ ಪ್ರಯೋಗನಡೆಸುವ ಓಡಾಟ ಪ್ರಗ್ಯಾನ್ ರೋವರ್ ನಡೆಸುವುದು

ಪ್ರಗ್ಯಾನ್ ರೋವರ್ ವಿಕ್ರಂನಿಂದ ಇಳಿದು ಚಂದ್ರನ ಮೇಲೆ ಆರು ಚಕ್ರಗಳ ಮೂಲಕ ಸುಮಾರು 3.6 ಕಿ.ಮೀ. ಪ್ರತಿ ಗಂಟೆಗೆ ಓಡಾಡುತ್ತಾ ಅದರಲ್ಲಿರುವ ಸ್ಪೆಕ್ಟ್ರೋಸ್ಕೋಪ್, ಇಮೇಜ್ ಅನಲೈಸರ್, ಸೆನ್ಸರುಗಳು, ಟ್ರಾನ್ಸ್ಮಿಟರುಗಳ ಸಹಾಯದಿಂದ ಎಲ್ಲಾ ವಿವರಗಳನ್ನು ಆಬರ್ಿಟರಿಗೆ ಬಿತ್ತರಿಸುವುದು. ಆಬರ್ಿಟರಿನಿಂದ ಸಂಕೇತಗಳು ಭೂಮಿಗೆ ರವಾನೆಯಾಗುವವು. ಶ್ರೀಹರಿಕೋಟಾದಿಂದಲೂ, ಬೆಂಗಳೂರು, ಪುಣೆ, ತಿರುವನಂತಪುರಗಳಿಂದಲೂ, ಇಸ್ರೋ ಸಂಕೇತಗಳನ್ನು ನಿರಂತರ ಸ್ವೀಕರಿಸಿ, ಹಂತ ಹಂತವಾಗಿ ಎಲ್ಲಾ ಕಾರ್ಯಕ್ರಮಗಳ ಹತೋಟಿ ಮಾಡುವುದು.

ಈ ಅಭಿಯಾನದ ಲಕ್ಷ್ಯ ಚಂದ್ರನ ಮಣ್ಣು, ತೇವಾಶ, ಇತರ ಘಟಕಗಳ ಸ್ವದೇಶೀ ಅಧ್ಯಯನವಾಗಿದೆ. ಭಾರತದ ಅಂತರಿಕ್ಷ ಸಾಧನೆಯಲ್ಲಿ ಮಾನವನನ್ನು ಚಂದ್ರನ ಮೇಲೆ ಕಳುಹಿಸುವ ಲಕ್ಷ್ಯವಿದ್ದು, ಆ ದಿಶೆಯಲ್ಲಿ ಇದೊಂದು ಮಹತ್ತರ ಮೈಲಿಗಲ್ಲು.

ಭಾರತದ ಅಂತರಿಕ್ಷ ಸಾಧನೆಗಳೇನೇನು?           ವಿಶ್ವದ ಅಂತರಿಕ್ಷ ಸಾಧನೆಗಳೇನೇನು?

ಉಡಾವಣಾ ನೌಕೆಗಳ್ಯಾವ್ಯಾವುವು?                     ಉಪಗ್ರಹಗಳ ಮಾದರಿಗಳೇನೇನು?

ಇವುಗಳ ಉಪಯೋಗಗಳೇನೇನು?

ಚಂದ್ರಯಾನ್ -2 ಕುರಿತು ವಿವರ ಲೇಖನ

Leave a Comment

Your email address will not be published. Required fields are marked *