ತಾರೀಕು ೧೧, ಜುಲಾಯಿ ೨೦೨೧: ಅಡಿಕೆ ಶಿಲೀಂಧ್ರ ರೋಗಗಳ ಹತೋಟಿಯ ಕುರಿತಾದ ತಜ್ಞರ ಜೊತೆಗಿನ ಕೃಷಿಕರ ಸಂವಾದ ಕ್ಲಬ್ಹೌಸ್ ಸಾಮಾಜಿಕ ಜಾಲ ಮಾಧ್ಯಮದಲ್ಲಿ ಜರಗಿತು. ಪಯಸ್ವಿನಿ.com ವೇದಿಕೆಯಿಂದ ಈ ಸಂವಾದ ಏರ್ಪಡಿಸಲಾಗಿತ್ತು.
Presentations were made by :
Dr VH Prathibha, Scientist (Plant Pathology), CPCRI Kasaragod and
Dr B Dhananjaya, Head, KVK Udupi
ಡಾಕ್ಟರ್ ಪ್ರತಿಭಾರವರು ಸಾಮಾನ್ಯವಾಗಿ ಕಂಡುಬರುವ ಅಡಿಕೆ ಶಿಲೀಂಧ್ರ ರೋಗಗಳ ಮಾಹಿತಿಯನ್ನು ನೀಡಿದರು.
ಶಿಲೀಂಧ್ರದ ಹೆಸರು Phytophthora meadii.
ಅಡಿಕೆಗೆ ಮೂರು ರೀತಿಯ ರೋಗಗಳು ಈ ಶಿಲೀಂಧ್ರದಿಂದ ಉಂಟಾಗುತ್ತದೆ.
1. ಕಾಯಿ ಕೊಳೆರೋಗ: ಅಡಿಕೆಯ ಗೊಂಚಲನ್ನು ಬಾಧಿಸುತ್ತದೆ.
2. ಸುಳಿ ಕೊಳೆರೋಗ: ಇದು ಮೇಲಿನ ಸುಳಿಯಿಂದ ಶುರುವಾಗಿ ಕೆಳಕ್ಕೆ ಬರುತ್ತದೆ
3. ಶಿರ ಕೊಳೆರೋಗ: ಇದು ಗಿಡದ ಕೆಳಗಿನ ಸೋಗೆಯಿಂದ ಶುರುವಾಗಿ ಮೇಲಕ್ಕೆ ಮೇಲೆ ಹೋಗುತ್ತದೆ
ಕಾರಣ: ತೋಟದ ಸ್ವಚ್ಛತೆ ಇಲ್ಲದಿರುವುದು ಹಾಗೂ ತೇವಾಂಶ
ಪರಿಹಾರ: 1% ಬೋರ್ಡೋಮಿಕ್ಸ್ಚರ್ ಸ್ಪ್ರೇ ಮಾಡುವುದು. ಬೋರ್ಡೋ ದ ಬದಲಾಗಿ mandipropamid ಎನ್ನುವ fungicide ನ್ನು (trade name: ರೀವಸ್) ಬಳಸಬಹುದು. ಇದನ್ನು 1 ಲೀಟರ್ ನೀರಿಗೆ 0.5ml ನಂತೆ ಸೇರಿಸಿ ಬಳಸಬಹುದು. ಆದರೆ ಇದು ಬಹಳ ದುಬಾರಿ.
ಹಿಂಗಾರ ಒಣಗುವಿಕೆ:
ಶಿಲೀಂಧ್ರದ ಹೆಸರು Colletotrichum
ಬೇಸಿಗೆ ಕಾಲದಲ್ಲಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಕೋಲೇಟೋಟ್ರೈಕಂ ಎನ್ನುವ ಶಿಲೀಂದ್ರ ಕಾರಣ.
ಇದರ ಲಕ್ಷಣಗಳು: ಸಿಂಗಾರ ತುದಿಯಿಂದ ಹಳದಿ ಆಗುತ್ತದೆ, ಹೆಣ್ಣು ಹೂವು ಬೀಳುತ್ತದೆ.
ಹತೋಟಿ ಕ್ರಮಗಳು: ತೋಟದ ಸ್ವಚ್ಛತೆ. 1 ಲೀಟರ್ ನೀರಿಗೆ 3gm ನಂತೆ ಮ್ಯಾಂಕೋಜೆಬ್ ಬೆರೆಸಿ ಸ್ಪ್ರೇ ಮಾಡುವುದು (trade name: ಡೈಥೇನ್, ಇಂಡೊಫಿಲ್, ಸಾಫ್, ಇತ್ಯಾದಿ) ಅಥವಾ propiconazole fungicide spray (trade name: ಧಾನ್, ಪ್ರೊಪಿಝೋಲ್, ಟಿಲ್ಟ್ , ಇತ್ಯಾದಿ) ಮಾಡುವುದು.
ಅಣಬೆ ರೋಗ:
Ganoderma ಎನ್ನುವ ಶಿಲಿಂಧ್ರ ಇದಕ್ಕೆ ಕಾರಣ. ಲಕ್ಷಣಗಳು: ನೀರು ಕಮ್ಮಿಯಾದ ತೋಟಗಳು ಅಥವಾ ಆರೈಕೆಯ ಕೊರತೆ ಇರುವ ತೋಟಗಳು ಇದಕ್ಕೆ ಜಾಸ್ತಿ ಬಲಿಯಾಗುತ್ತವೆ. ಕೆಳಗಿನ ಭಾಗದ ಎಲೆಗಳು ಹಳದಿಯಾಗಿ ಬಾಗಿ ಮರಕ್ಕೆ ಅಂಟಿಕೊಂಡಿರುತ್ತವೆ. ಇದು ಬೇರಿಗೆ ಸೋಂಕು ತಗಲುತ್ತದೆ. ಬುಡದಲ್ಲಿ ಬೇರು ಕೊಳೆತಿರುತ್ತದೆ. ಕಾಂಡದ ಭಾಗದಲ್ಲಿ ಕೆಂಪು ದ್ರವ ಸ್ರವಿಸುತ್ತದೆ.
ನಿರ್ವಹಣೆ: ಟ್ರೈಕೋಡರ್ಮಾ 1 ಕೆಜಿ ಮತ್ತು 100 ಕೆಜಿ ಬೇವಿನ ಹಿಂಡಿಯನ್ನು ಮಿಕ್ಸ್ ಮಾಡಿ ಸ್ವಲ್ಪ ನೀರು ಮಿಶ್ರಣ ಮಾಡಿ ಮೇಲಿನಿಂದ ಗೋಣಿಚೀಲ ಹಾಕಿ ಒಂದು ವಾರ ಕಾಲ ಮುಚ್ಚಿಡಬೇಕು. ನಂತರ ಇದನ್ನು ಒಂದು ಮರಕ್ಕೆ 2ಕೆಜಿಯಂತೆ ಮೂರು ತಿಂಗಳಿಗೊಮ್ಮೆ ಕೊಡಬೇಕು. ಇದೇ ರೀತಿ ಒಂದು ವರ್ಷ ಮಾಡಬೇಕು. ಪ್ರತಿವರ್ಷ ಹೀಗೆ ಮಾಡುವ ಅಗತ್ಯ ಇರುವುದಿಲ್ಲ. ಅಥವಾ Hexaconozole (trade name: Contaf) 1ml ಅನ್ನು 20 ಲೀಟರ್ ನೀರಿಗೆ ಸೇರಿಸಿ ಮೂರು ತಿಂಗಳಿಗೊಮ್ಮೆ ಸ್ಪ್ರೇ ಮಾಡಬೇಕು ಇದನ್ನು ಒಮ್ಮೆ ಮಾಡಿ ಬಿಟ್ಟರೆ ರೋಗ ಹತೋಟಿಗೆ ಬರುವುದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ವರ್ಷ ಕಾಲ ಮಾಡಬೇಕು.
ಎಲೆಚುಕ್ಕೆ ರೋಗ:
ಇದು ಒಂದು ಸಣ್ಣಪ್ರಮಾಣದ ರೋಗ ಎರಡು ಅಥವಾ ಮೂರುವರ್ಷದ ಗಿಡಗಳಿಗೆ ಇದರ ಬಾಧೆ ಜಾಸ್ತಿ. ಇದು ಫಿಲೋಸ್ಟಿಕ್ಟಾ ಎಂಬ ಶಿಲೀಂಧ್ರದಿಂದ ಬರುವುದು.
ಲಕ್ಷಣಗಳು : ಕಂದುಬಣ್ಣದ ಚುಕ್ಕೆಗಳು ಚಿಕ್ಕದಾಗಿ ಕಾಣಿಸಿಕೊಂಡು ಕ್ರಮೇಣ ದೊಡ್ಡದಾಗುತ್ತದೆ. ಚುಕ್ಕಿಗಳು ಒಂದಕ್ಕೊಂದು ಜಾಯಿನ್ ಆಗುತ್ತದೆ. ಸಣ್ಣ ಪ್ರಮಾಣದಲ್ಲಿದ್ದರೆ ಬಂದಂತಹ ಗರಿಗಳನ್ನು ತುಂಡು ಮಾಡಬೇಕು. ರೋಗ ಜಾಸ್ತಿ ಇದ್ದರೆ 1 ಲೀಟರ್ ನೀರಿಗೆ 2 ಎಂಎಲ್ contaf spray ಮಾಡಬಹುದು.
ಡಾಕ್ಟರ್ ಧನಂಜಯ್ (ಕೆವಿಕೆ ಬ್ರಹ್ಮಾವರ):
ಹಸಿ ಅಡಿಕೆ ಬೀಳುವ ಕಾರಣ ಪತ್ತೆಹಚ್ಚುವಿಕೆ: ಬಿದ್ದ ಅಡಿಕೆಯನ್ನು ರಾಶಿ ಹಾಕಿದರೆ ಅದರಲ್ಲಿ ಫಂಗಲ್ ಡೆವಲಪ್ಮೆಂಟ್ ಅಂದರೆ ಬೂಸ್ಟ್ ತರಹ ಬಂದಿದ್ದರೆ ಅದು ಕೊಳೆರೋಗದಿಂದ ಉದುರಿರುವುದು ಎಂದರ್ಥ. ಹಸಿರಾಗಿದ್ದರೆ ಅದು pentatomid ಎಂಬ ತಿಗಣೆಯಿಂದ ಎಂದರ್ಥ. ಅಡಿಕೆಯನ್ನು ಭಾಗ ಮಾಡಿದರೆ ಒಳಗಿನ ತಿರುಳಿನ ಭಾಗಕ್ಕೆ ಸಿಪ್ಪೆಯಿಂದ ಸೂಜಿ ಚುಚ್ಚಿದಂತೆ ತೂತಿದ್ದು ತಿರುಳು ಕಂದುಬಣ್ಣಕ್ಕೆ ತಿರುಗಿರುತ್ತದೆ. ತಿಗಣೆ ಪುಷ್ಪ ಪಾತ್ರೆಯೊಳಗೆ ರಸ ಹೀರುತ್ತದೆ ನಂತರ ಮೂರು ನಾಲ್ಕು ದಿನದಲ್ಲಿ ಕಾಯಿ ಅಡಿಕೆ ಕೆಳಗೆ ಉದುರುತ್ತದೆ. ಇದು ಎಲ್ಲಾ ಮರಗಳಿಗೂ ಬರುವುದಿಲ್ಲ. ಕೆಳಗಡೆ ಹಸಿರು ಹುಲ್ಲು ಇದ್ದರೆ ಈ ಕೀಟದ ಬಾಧೆ ಜಾಸ್ತಿ.
ಪರಿಹಾರ: Chlorpyriphos 2 ಎಂಎಲ್ 1 ಲೀಟರ್ ನೀರಿಗೆ ಸೇರಿಸಿ ಗೊನೆಗೆ ಸ್ಪ್ರೇ ಮಾಡುವುದು.
ಹಿಂಗಾರ ಸಾಯುವುದು:
ಸತ್ತ ಹಿಂಗಾರವನ್ನು ತೆಗೆಯದಿದ್ದರೆ ಮಳೆಗಾಲದಲ್ಲಿ ಕೊಳೆರೋಗ ಬಂದು ಸುಳಿಯ ಮೂಲಕ ಮರವನ್ನು ಪ್ರವೇಶಿಸುತ್ತದೆ. ಇಡೀ ಮರ ಸಾಯಲೂಬಹುದು
ಪರಿಹಾರ : 1 % ಬೋರ್ಡೋ ಸ್ಪ್ರೇ .
1% ಬೋರ್ಡೋ ವಿನ pH ಲೆವೆಲ್ ಪರೀಕ್ಷೆ ಮಾಡುವ ಸುಲಭ ವಿಧಾನ : ಬಿಳಿ ಕಾಗದದಲ್ಲಿ ಸ್ವಲ್ಪ ಶುದ್ಧ ಅರಶಿನ ಹುಡಿ ತೆಗೆದುಕೊಂಡು ಹರಡಬೇಕು. ಒಂದು ಡ್ರಾಪ್ ಮೈಲುತುತ್ತ ನೀರನ್ನು ಅರಸಿನ ಹುಡಿಯ ಮೇಲೆ ಹಾಕಬೇಕು ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಸುಣ್ಣ ಜಾಸ್ತಿ ಎಂದರ್ಥ ಕಂದು ಬಣ್ಣಕ್ಕೆ ತಿರುಗಿದರೆ ಮೈಲುತುತ್ತು ಜಾಸ್ತಿ ಎಂದರ್ಥ. ಹಾಗಿದ್ದಲ್ಲಿ ಇನ್ನೂ ಸ್ವಲ್ಪ ಸುಣ್ಣದ ನೀರನ್ನು ಸೇರಿಸಬೇಕು. ಬಣ್ಣ ಬದಲಾಯಿಸದೆ ತಟಸ್ಥ ವಾಗಿದ್ದರೆ ಪಿಎಚ್ ಲೆವೆಲ್ ಸರಿಯಾಗಿದೆ ಎಂದರ್ಥ.
ಡಾ| ಭವಿಷ್ಯ:
Perianth mite ಎನ್ನುವ ಕೀಟದ ಉಪದ್ರವ ಏಪ್ರಿಲ್ ಮೇ ತಿಂಗಳಲ್ಲಿ ಜಾಸ್ತಿ ಇರುತ್ತದೆ. ಅದು ರಸ ಹೀರಿದ ಮೇಲೆ ಒಂದು ತಿಂಗಳ ನಂತರ ಬಾಡಿ ಬೀಳುವ ಸಾಧ್ಯತೆ ಇದೆ. ಇದರ ಹತೋಟಿಗೆ ಕ್ವಿನಲ್ಫೋಸ್ ಅಥವಾ ರೋಗರ್ ಅನ್ನು ಬಳಸಬಹುದು.
ನಂತರ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.


ವರದಿ: ಶ್ರೀ ಗುರುರಾಜ ರಾವ್ ಹಾಗು ಮುರಳಿಕೃಷ್ಣ